ಬೆಂಗಳೂರು : ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ದಂಪತಿಗಳ ವಿರುದ್ಧ ಎಫ್ ಐ ಆರ್ (FIR) ದಾಖಲಾಗಿದೆ.
ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಮೊಹಮದ್ ಮುನಾಯಿದ್ ಹಾಗೂ ಶಾಯಿಸ್ತಾ ದಂಪತಿ ವಿರುದ್ಧಐಪಿಸಿ ಸೆಕ್ಷನ್ 309, 290 ರಡಿ ಎಫ್ ಐ ಆರ್ ದಾಖಲಾಗಿದೆ. ವಶಕ್ಕೆ ಪಡೆದ ದಂಪತಿಗಳನ್ನು ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲೇ ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಜೆಜೆ ನಗರದ ಶಾಯಿಸ್ತಾ , ಮೊಹಮದ್ ಮುನಾಯಿದ್ ದಂಪತಿ ಬ್ಯಾಂಕ್ ನಿಂದ ಸಾಲ ಪಡೆದಿದ್ದು, ತೀರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಬ್ಯಾಂಕ್ ದಂಪತಿಗಳ ಜಮೀನನ್ನು ಹರಾಜು ಹಾಕಿದೆ ಎನ್ನಲಾಗಿದೆ. ಇದರಿಂದ ಮನನೊಂದ ಶಾಯಿಸ್ತಾ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದೊಡ್ಡ ಹೈ ಡ್ರಾಮಾ ಮಾಡಿದ್ದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ದಂಪತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಕುಟುಂಬ ಸಮೇತ ಬಂದ ಶಾಹಿಸ್ತ ಬಾನು ಎಂಬುವವರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಬೆಂಗಳೂರು ಕೋ ಆಪರೇಟಿವ್ ಸೊಸೈಟಿ ಚಾಮರಾಜಪೇಟೆ ಗೌರಿಪಾಳ್ಯದಲ್ಲಿ ಶಾಹಿಸ್ತಾ ಬಾನು ಅವರ ಗಂಡ ಮುನಾಯಿದುಲ್ಲಾ ಸಾಲ ಪಡೆದುಕೊಂಡಿದ್ದರು. ಜೆಜೆ ನಗರದಲ್ಲಿರುವ ಮನೆಗೆ 50 ಲಕ್ಷ ಲೋನ್ ತೆಗೆದುಕೊಂಡಿದ್ದರು. ಒಟ್ಟು 97 ಲಕ್ಷ ಹಣ ಪಾವಸಿದ್ದೇವೆ ಆದ್ರೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.