ಪಟನಾ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಬಿಹಾರದ ಬೇಗುಸರಾಯ್ನಲ್ಲಿ ಎಫ್ಐಆರ್ ದಾಖಲಾಗಿದೆ.
ಇದರಲ್ಲಿ ಧೋನಿ ಹೊರತುಪಡಿಸಿ ಇತರ ಏಳು ಮಂದಿಯನ್ನು ಹೆಸರಿಸಲಾಗಿದೆ. ವರದಿಗಳ ಪ್ರಕಾರ, ಎಸ್ಕೆ ಎಂಟರ್ಪ್ರೈಸಸ್ ಹೆಸರಿನ ಕಂಪನಿಯು ಬೇಗುಸರಾಯ್ನ ಸಿಜೆಎಂ ನ್ಯಾಯಾಲಯದಲ್ಲಿ ದಾವೆಯನ್ನು ದಾಖಲಿಸಿದೆ. ಅವರು ‘ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್’ ನಿಂದ ಪಡೆದ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿದ್ದಾರೆ.
ಇದರಂತೆ ಪೊಲೀಸರು ಈ ಎಫ್ಐಆರ್ ದಾಖಲಿಸಿದ್ದಾರೆ.
BIG NEWS: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು
ವಿಶ್ವಕಪ್ ವಿಜೇತ ನಾಯಕ ಉತ್ಪನ್ನವನ್ನು ಪ್ರಚಾರ ಮಾಡಿದ್ದರು ಎಂಬ ಕಾರಣಕ್ಕೆ ದೂರುದಾರರು ದಾವೆಯಲ್ಲಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಏತನ್ಮಧ್ಯೆ, ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ಮಿಶ್ರಾ ಅವರಿಗೆ ವಹಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 28 ರಂದು ನಡೆಯಲಿದೆ.