ಮಂಗಳೂರು: ಯುವತಿಯೋರ್ವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ಮಂಗಳೂರಿನ ಖ್ಯಾತ ವೈದ್ಯೆ ಹಾಗೂ ಯುವಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಹಿಂದೂ ಯುವತಿಯನ್ನು ಇಸ್ಲಾಂ ಗೆ ಮತಾಂತರ ಮಾಡಿ ಆಕೆ ಹೆಸರನ್ನು ಆಯೇಷಾ ಎಂದು ಬದಲಿಸಲಾಗಿದೆ. ತನ್ನನ್ನು ಇಸ್ಲಾಂ ಗೆ ಮತಾಂತರ ಮಾಡಿ ಲೈಂಗಿಕ ದೌರ್ಜನ್ಯ ನೀಡಲಾಗಿದೆ ಎಂದು ಯುವತಿ ದೂರು ನೀಡಿದ್ದಳು.
ಮಂಗಳೂರಿನ ವೈದ್ಯೆ ಡಾ.ಜಮೀಲಾ ವಿರುದ್ಧವೂ ಮತಾಂತರ ಆರೋಪ ಕೆಳಿಬಂದಿದ್ದು, ಕುರಾನ್ ಓದಲು ಹೇಳಿ, ನಮಾಜ್ ಮಾಡಿಸಿ ಮತಾಂತರ ಮಾಡಿದ್ದಾರೆ. ಮೊಬೈಲ್ ಅಂಗಡಿಯ ಖಲೀಲ್ ಎಂಬಾತ ಪರಿಚಯವಾಗಿ ಯುವತಿ ಆತನ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಈ ವೇಳೆ ಆಕೆಗೆ ಕುರಾನ್ ಓದಿ, ನಮಾಜ್ ಮಾಡಲು ಒತ್ತಾಯಿಸಿದ್ದರು. ಅಲ್ಲದೇ ಖಲೀಲ್, ಡಾ.ಜಲೀಲಾ ಮನೆಯಲ್ಲಿಯೂ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದ. ಅಲ್ಲಿಯೂ ದೌರ್ಜನ್ಯವೆಸಗಲಾಗಿದೆ. ಹಣ ಮತ್ತು ಕೆಲಸದ ಆಮಿಷವೊಡ್ಡಿ ಮತಾತಂತರವೆಸಗಿ ದೌರ್ಜನ್ಯವೆಸಗಲಾಗಿದೆ ಎಂದು ದೂರು ನೀಡಿದ್ದಾಳೆ.
ಇದೀಗ ವೈದ್ಯೆ ಹಾಗೂ ಖಲೀಲ್, ಇಮಾಮ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 354, 354 (A) 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.