ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ (36)ಜಗತ್ತಿನ ಅತ್ಯಂತ ಕಿರಿಯ ಮಹಿಳಾ ಪ್ರಧಾನಿ ಅಂತಾನೇ ಫೇಮಸ್ ಆದವರು. ಆದರೆ ಈಗ ಅವರು ಪಾರ್ಟಿಯಲ್ಲಿ ಮಾಡಿರೋ ಡಾನ್ಸ್‌ನಿಂದಾಗಿ ಫೇಮಸ್ ಆಗಿದ್ದಾರೆ. ಫಿನ್ಲೆಂಡ್ ಪಿಎಂ ತಮ್ಮ ಸ್ನೇಹಿತರ ಜೊತೆ ಮನೆಯಲ್ಲಿ ಪಾರ್ಟಿ ಮಾಡುತ್ತಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಈ ವಿಡಿಯೋ ವೈರಲ್ ಆಗಿದ್ದು ಈಗ ಸನ್ನಾ ಮರಿನ್ ಟೀಕೆಗಳನ್ನ ಎದುರಿಸುವ ಹಾಗಾಗಿದೆ.
ತಮ್ಮ ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡುತ್ತಿರುವಾಗ ಸನ್ನಾ ಮರೀನ್ ಬಿಂದಾಸ್ ಆಗಿ ಡಾನ್ಸ್ ಮಾಡೋದನ್ನ ಈ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಈ ವಿಡಿಯೋ ನೋಡಿದವರು ಸನ್ನಾ ಮರೀನ್ ನಶೆಯಲ್ಲಿ ಇದ್ದಾರೆ ಅಂತ ಟೀಕೆ ಮಾಡಿದ್ದಾರೆ.
ಫಿನ್ಲ್ಯಾಂಡ್‌ನ ಖಾಸಗಿ ಅಪಾರ್ಟ್ಮೆಂಟ್ವೊಂದರಲ್ಲಿ ಈ ಪಾರ್ಟಿ ನಡೆದಿದ್ದು, ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಅಥವಾ ಮರಿನ್ ಮತ್ತು ಆಕೆಯ ಸ್ನೇಹಿತರು ಸೆಲೆಬ್ರೇಟ್ ಮಾಡುತ್ತಿದ್ದರಾ ಎಂಬುದು ಸ್ಪಷ್ಟವಾಗಿಲ್ಲ. ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರ್ಯಾಪರ್ ಪೆಟ್ರಿ ನೈಗಾರ್ಡ್, ಟಿವಿ ನಿರೂಪಕಿ ಟಿನ್ನಿ ವಿಕ್ಸ್ಟ್ರೋಮ್, ಛಾಯಾಗ್ರಾಹಕಿ ಮತ್ತು ಪ್ರಭಾವಿ ಜನಿತಾ ಆಟಿಯೊ, ರೆಡಿಯೋ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಮರಿನ್ ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಈ ವಿಡಿಯೋದಲ್ಲಿ ಪ್ರಧಾನಿ ಮರಿನ್ ಮತ್ತು ಅವರ ಗೆಳೆಯರ ಗುಂಪನ್ನ ನೋಡಬಹುದು ಅಶ್ಲೀಲ ಹಾಡನ್ನ ಇಲ್ಲಿ ಕೇಳಬಹುದಾಗಿದೆ. ಅದರ ಜೊತೆಗೆ ‘ಜೌಹೋಜೆಂಗಿ’ ಎಂದು ಕೂಗುವುದನ್ನ ಕೇಳಬಹುದು. ಇದರರ್ಥ ಫಿನ್ನಿಷ್ ಭಾಷೆಯಲ್ಲಿ ‘ಫ್ಲೋರ್‘. ಇದು ಕೊಕೇನ್ಗೆ ಗ್ರಾಮ್ಯ ಪದವಾಗಿದೆ ಎಂದು ಫಿನ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಫಿನ್ಲೆಂಡ್ ಮಹಿಳಾ ಪ್ರಧಾನಿ ಹಾಗೂ ಆ ಗುಂಪು ಡ್ರಗ್ಸ್ ತೆಗೆದುಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.
ಇನ್ನು, ಫಿನ್ಲೆಂಡ್ ಮಹಿಳಾ ಪ್ರಧಾನಿ ಹಾಗೂ ಅವರ ಗುಂಪಿನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸನ್ನಾ ಮರಿನ್ ಮರುದಿನವೇ ಸುದ್ದಿಗೋಷ್ಠಿ ನಡೆಸಿ, ‘ತಾನು ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು “ಮರೆಮಾಚಲು ಅಥವಾ ಮರೆಮಾಡಲು ಏನೂ ಇಲ್ಲ” ಎಂದು ಹೇಳಿದ್ದಾರೆ.
ಅಲ್ಲದೆ, ತಾನು ಹೆಚ್ಚು ಕುಡಿದಿಲ್ಲ, ಅದೊಂದು ಖಾಸಗಿ ಕಾರ್ಯಕ್ರಮ ಎಂದೂ 36 ವರ್ಷದ ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ವೈರಲ್ ಮಾಡಿದ ವ್ಯಕ್ತಿಯ ವಿರುದ್ಧ ತಿರುಗೇಟು ನೀಡಿದ ಪ್ರಧಾನಿ, ‘’ಇವು ಖಾಸಗಿ ವಿಡಿಯೋಗಳು, ಇವುಗಳು ಎಲ್ಲೂ ಪ್ರಕಟಿಸಲಾಗುವುದಿಲ್ಲ ಎಂದು ನಾನು ನಂಬಿದ್ದೆ’’ ಎಂದು ಖಡಕ್ ಆಗಿ ಟೀಕಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅನೇಕ ಜನರು ವಿಡಿಯೋದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಲ್ಲದೆ, ಈ ರೀತಿ ವರ್ತಿಸುವುದರಿಂದ ಯುವಕರು ಅಥವಾ ಯುವತಿಯರನ್ನ ಆಕರ್ಷಿಸಲು ಸಾಧ್ಯವಿಲ್ಲ. ಇದರಿಂದ ಜನಪ್ರಿಯತೆ ಹೆಚ್ಚುವುದಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಈಕೆಗೆ ಪ್ರಧಾನಿಯಾಗುವ ಅರ್ಹತೆಯೇ ಇಲ್ಲ ಎಂದೂ ಕಿಡಿ ಕಾರಿದ್ದಾರೆ.
ಈ ಹಿಂದೆ ಕೋವಿಡ್ -19 ಸೋಂಕಿತ ವ್ಯಕ್ತಿಯೊಬ್ಬರ ಜತೆಗೆ ಸಂಪರ್ಕಕ್ಕೆ ಬಂದ ನಂತರವೂ ಬೆಳಗ್ಗೆ 4 ಗಂಟೆಯವರೆಗೆ ಕ್ಲಬ್‌ನಲ್ಲಿ ಇದ್ದದ್ದಕ್ಕಾಗಿ ಪ್ರಧಾನಿ ಸನ್ನಾ ಮರಿನ್ ಕ್ಷಮೆ ಅವರನ್ನು ಕ್ಷಮೆ ಕೋರುವಂತೆ ಒತ್ತಾಯಿಸಲಾಗಿತ್ತು. ನಂತರ, ಆಕೆ ಕ್ಷಮಾಪಣೆ ಕೋರಿದ್ದರು.
ಇನ್ನು, 2019 ರಲ್ಲಿ 34 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದರು ಸನ್ನಾ ಮರಿನ್. ಕಿರಿಯ ವಯಸ್ಸಿನ ಪ್ರಧಾನಿ ಆಗಿದ್ದರಿಂದಲೋ ಏನೋ ಒಂದಲ್ಲ ಒಂದು ಟೀಕೆಗೆ ಆಗಾಗ ಗುರಿಯಾಗುತ್ತಲೇ ಇದ್ದಾರೆ ಸನ್ನಾ ಮರಿನ್.