ತೆರಿಗೆದಾರರ ದುಡ್ಡು ಬಳಸಿಕೊಂಡು ಕುಟುಂಬಸ್ಥರ ಉಪಹಾರಕ್ಕೆ ಬಳಸಿಕೊಂಡಿದ್ದಾರೆ ಎಂಬ ಆಪಾದನೆ ಎದುರಿಸುತ್ತಿರುವ ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್‌ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ತಮ್ಮ ಅಧಿಕೃತ ನಿವಾಸ ’ಕೆಸರಂತಾ’ದಲ್ಲಿ ವಾಸಿಸುತ್ತಿದ್ದ ವೇಳೆ ಮಾರಿನ್ ಅವರು ತಮ್ಮ ಕುಟುಂಬದ ಉಪಹಾರಕ್ಕಾಗಿ ಪ್ರತಿತಿಂಗಳು 300 ಯೂರೋಗಳನ್ನು ಕ್ಲೇಂ ಮಾಡುತ್ತಿದ್ದರು ಎಂದು ಟ್ಯಾಬ್ಲಾಯ್ಡ್ ಒಂದು ವರದಿ ಮಾಡಿದ ಬಳಿಕ ವಿವಾದ ಸೃಷ್ಟಿಯಾಗಿದೆ. ಈ ಪ್ರಯೋಜನವನ್ನು ಹಿಂದೆ ಪ್ರಧಾನಿಯಾಗಿದ್ದವರಿಗೂ ಕೊಡಲಾಗುತ್ತಿತ್ತು ಎಂದು ಮಾರಿನ್ ಹೇಳಿಕೊಂಡಿದ್ದಾರೆ.
“ಪ್ರಧಾನಿಯಾಗಿ ನಾನು ಈ ಪ್ರಯೋಜನವನ್ನು ಕೇಳಿರಲಿಲ್ಲ ಅಥವಾ ಅದನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ” ಎಂದು ಮಾರಿನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸಲು ಕೋರಿಕೆ ಬಂದ ಬೆನ್ನಿಗೆ ಪೊಲೀಸರು ಪ್ರಾಥಮಿಕ ಹಂತದ ತನಿಖೆಯನ್ನು ಘೋಷಿಸಿದ್ದಾರೆ.