ಇತ್ತೀಚೆಗಂತೂ ರೀಲ್ಸ್ ಹವಾ..ಎಲ್ಲಿ ಬೇಕಾದಲ್ಲಿ ಮಹಿಳೆಯರು, ಯುವತಿಯರು ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಾರೆ.
ಇದೀಗ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬ್ಯಾಗೇಜ್ ಕ್ಯಾರೋಲ್ ಮೇಲೆ ಮಲಗಿ ರೀಲ್ಸ್ ಮಾಡಿದ ಇತ್ತೀಚಿನ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೊವನ್ನು ಡೆಸಿಮೊಜಿಟೊ ಎಂಬ ಬಳಕೆದಾರರು ಎಕ್ಸ್ನಲ್ಲಿ ಹಂಚಿಕೊಂಡಿದ್ದು, “ವೈರಸ್ ವಿಮಾನ ನಿಲ್ದಾಣಗಳಿಗೂ ತಲುಪಿದೆ” ಎಂಬ ಶೀರ್ಷಿಕೆಯೊಂದಿಗೆ ಬರೆಯಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಇಂತಹ ಕೃತ್ಯವನ್ನು ಮಾಡಿದ್ದಕ್ಕಾಗಿ ಅನೇಕ ಜನರು ಮಹಿಳೆಯನ್ನು ಟೀಕಿಸಿದ್ದಾರೆ. ಅಲ್ಲದೇ ಲಕ್ಷಗಳಲ್ಲಿ ದಂಡ ವಿಧಿಸಿ ಎಂದು ಕಮೆಂಟ್ ಮಾಡಿದ್ದಾರೆ.