ಹಣದ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿಗೆ ಪತಿ ರವೀಂದರ್ ಗೆ ಜಾಮೀನು ಮಂಜೂರಾಗಿದೆ.
ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನಿರ್ಮಾಪಕನನ್ನು ಬಂಧಿಸಿತ್ತು. ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಪ್ಲಾಂಟ್ ಸ್ಥಾಪಿಸಿದರೆ ಸಾಕಷ್ಟು ಲಾಭ ಪಡೆಯಬಹುದು ಎಂದು ಚೆನ್ನೈನ ಬಾಲಾಜಿ ಎಂಬ ವ್ಯಕ್ತಿಯನ್ನು ರವೀಂದರ್ ನಂಬಿಸಿ 16 ಕೋಟಿ ರೂ ಮೋಸ ಮಾಡಿದ್ದನು.
ತಮಿಳು ಚಿತ್ರರಂಗದ ನಟಿ, ನಿರೂಪಕಿ ಮಹಾಲಕ್ಷ್ಮಿ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಜೊತೆ ಮದುವೆಯಾಗಿದ್ದರು, ಮದುವೆಯಾದಾಗಿನಿಂದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ ಆಗಿತ್ತು. ಮಹಾಲಕ್ಷ್ಮಿ, ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ಸಿನಿಮಾ ಒಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು.