ಚೀನಾದಲ್ಲಿ ಮಹಿಳೆಯರು ತಮ್ಮದೇ ಆದ ಭಿನ್ನ ಭಾಷೆಯನ್ನು ಹೊಂದಿದ್ದಾರೆ. ಅವರ ಈ ಭಾಷೆ ಪುರುಷರಿಗೆ ತಿಳಿದಿಲ್ಲ. ಪುರುಷ ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಕಂಡುಹಿಡಿದ ಭಾಷೆ ಇದು.
ನೂರಾರು ವರ್ಷಗಳ ಹಿಂದೆ, ಗ್ರಾಮೀಣ ಹುನಾನ್ ಪ್ರಾಂತ್ಯದ ಚೀನೀ ಮಹಿಳೆಯರು ಪುರುಷರಿಗೆ ಅರ್ಥವಾಗದ ನುಶು ಭಾಷೆಯನ್ನು ಕಂಡುಹಿಡಿದರು. ಆ ಸಮಯದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ. ಅವರ ಕಾಲುಗಳನ್ನು ಕಟ್ಟಲಾಗ್ತಿತ್ತು. ಇದರಿಂದಾಗಿ ಅವರು ಸ್ವತಂತ್ರವಾಗಿ ನಡೆಯಲು ಅಸಾಧ್ಯವಾಗಿತ್ತು. ಶಿಕ್ಷಣಕ್ಕೂ ಅವಕಾಶ ನೀಡಿರಲಿಲ್ಲ. ಅವರನ್ನು ಕೋಣೆಗಳಲ್ಲಿ ಬೀಗ ಹಾಕಿ ಇಡುತ್ತಿದ್ದರು.
ಈ ಸಮಯದಲ್ಲಿ ಕಸೂತಿ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದ ಮಹಿಳೆಯರು ಹೊಸ ಭಾಷೆಯನ್ನು ಬರೆದರು. ಅದಕ್ಕೆ ನುಶು ಎಂದು ಹೆಸರಿಟ್ಟರು. ನುಶುವನ್ನು ವಿಶ್ವದ ಮಹಿಳೆಯರಿಂದ ಮತ್ತು ಮಹಿಳೆಯರಿಗಾಗಿ ಬರೆದ ಏಕೈಕ ಲಿಪಿ ಎಂದು ಪರಿಗಣಿಸಲಾಗಿದೆ. ಯುನೆಸ್ಕೋದಿಂದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸ್ಥಾನಮಾನವನ್ನು ನೀಡಲಾಗಿದೆ.
ಈ ಭಾಷೆ ಇಂದಿಗೂ ಉಳಿದುಕೊಂಡಿದೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಿದೆ. ಆದರೆ ಈಗ ಅದು ಅಳಿವಿನಂಚಿನಲ್ಲಿದೆ. ಇದನ್ನು ಓದಬಲ್ಲ ಕೆಲವೇ ಕೆಲವು ಮಹಿಳೆಯರು ಚೀನಾದಲ್ಲಿದ್ದಾರೆ. ಈ ಬಗ್ಗೆ ಸಾಕಷ್ಟ್ಯಚಿತ್ರ, ಕಾರ್ಯಾಗಾರಗಳು ನಡೆದಿವೆ. ಶಾಂಘೈನ ಯುವ ಛಾಯಾಗ್ರಾಹಕ ಚೆನ್ ಯುಲು, ಇದನ್ನು ಉತ್ತೇಜಿಸಲು, ಯುವ ಪೀಳಿಗೆಗೆ ತಿಳಿಸಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.