ಕಾಂಗ್ರೆಸ್ ಸಂಸದ ಶಶಿ ತರೂರ್ ಯಾವಾಗಲೂ ತಮ್ಮ ಚತುರಮತಿ ಟ್ವೀಟ್ಗಳಿಂದ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇರುವ ಹಿಡಿತ ಭಯಂಕರದ್ದು. ಅವರ ಟ್ವೀಟ್ ಅರ್ಥ ಮಾಡಿಕೊಳ್ಳಲು ಡಿಕ್ಷನರಿಯನ್ನು ಪಕ್ಕದಲ್ಲೇ ಇಟ್ಟುಕೊಂಡಿರಬೇಕು.
ಇಂಧನ ಬೆಲೆಗಳು ನಿಯಂತ್ರಣಕ್ಕೆ ಸಿಗದೇ ಏರುತ್ತಿರುವ ವಿಚಾರದ ಬಗ್ಗೆ ಟ್ವೀಟ್ ಮಾಡಿದ ತರೂರ್ ’ಫಿಲಿಯನೇರ್’ ಎಂಬ ಪದವನ್ನು ’ವಾರದ ಪದ’ ಎಂದು ತಮ್ಮ ಕಡೆಯಿಂದ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಭಾರತದಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಭರ್ತಿ ಮಾಡಿಕೊಳ್ಳುವವನೇ ’ಫಿಲಿಯನೇರ್’ ಎಂದು ಪ್ರಸಕ್ತ ಪರಿಸ್ಥಿತಿಯನ್ನಯ ವ್ಯಂಗ್ಯವಾಗಿ ಕಟ್ಟಿಕೊಡಲಾಗಿದೆ.
‘ಪಾವ್ರಿ’ ಟ್ರೆಂಡ್ ಮೂಲಕ ವೈದ್ಯರಿಂದ ಸುರಕ್ಷತೆಯ ಪಾಠ
ತರೂರರ ಈ ಟ್ವೀಟ್ಗೆ ನಿರೀಕ್ಷೆಯಂತೆಯೇ ದೇಸೀ ನೆಟ್ಟಿಗರಿಂದ ಫನ್ನಿ ಪ್ರತಿಕ್ರಿಯೆಗಳು ಬಂದಿವೆ.