ಈವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲವೆಂದಾದ್ರೆ ಈ ತಿಂಗಳು ತೆರಿಗೆ ರಿಟರ್ನ್ ಮಾಡಿ. ಈ ತಿಂಗಳು ತೆರಿಗೆ ರಿಟರ್ನ್ ಮಾಡಿಲ್ಲವೆಂದಾದ್ರೆ ಜುಲೈ ಒಂದರ ನಂತ್ರ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. ಯಾಕೆಂದ್ರೆ ತೆರಿಗೆ ರಿಟರ್ನ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲಾಗ್ತಿದೆ. 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆ ದಿನಾಂಕವನ್ನು ಜುಲೈ 31 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆಯ ಹೊಸ ಪೋರ್ಟಲ್ ಇಂದಿನಿಂದ ಪ್ರಾರಂಭವಾಗಿದೆ.
2021 ರ ಹಣಕಾಸು ಕಾಯ್ದೆಯ ಹೊಸ ನಿಯಮಗಳ ಪ್ರಕಾರ, ತೆರಿಗೆದಾರರು ಸತತ ಎರಡು ವರ್ಷಗಳ ಕಾಲ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ ಡಬಲ್ ಟಿಡಿಎಸ್ ಮತ್ತು ಟಿಸಿಎಸ್ ಪಾವತಿಸಬೇಕಾಗುತ್ತದೆ. ಈ ಎರಡು ವರ್ಷಗಳ ಟಿಡಿಎಸ್ ಬಾಕಿ 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಅದಕ್ಕೆ ಅನುಗುಣವಾಗಿ ಟಿಡಿಎಸ್ ಪಾವತಿಸಬೇಕಾಗುತ್ತದೆ. ಈ ನಿಯಮವು ಜುಲೈ 1, 2021 ರಿಂದ ಜಾರಿಗೆ ಬರಲಿದೆ. ದಂಡದ ಟಿಡಿಎಸ್ ಮತ್ತು ಟಿಸಿಎಸ್ ದರಗಳು ಶೇಡಕಾ 10-20ರಷ್ಟಿರುತ್ತದೆ. ಸಾಮಾನ್ಯವಾಗಿ ಇದು ಶೇಕಡಾ 5-10ರಷ್ಟಿರುತ್ತದೆ.
ಹೊಸ ಟಿಡಿಎಸ್ ನಿಯಮಗಳ ಪ್ರಕಾರ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 206 ಎಬಿ ಅಡಿಯಲ್ಲಿ, ಟಿಡಿಎಸ್ ಅನ್ನು ಆದಾಯ ತೆರಿಗೆ ಕಾಯ್ದೆಯ ಅಸ್ತಿತ್ವದಲ್ಲಿರುವ ಎರಡು ಪಟ್ಟು ಅಥವಾ ಚಾಲ್ತಿಯಲ್ಲಿರುವ ದರಕ್ಕಿಂತ ಎರಡು ಅಥವಾ ಶೇಕಡಾ 5ರಷ್ಟು ದಂಡ ವಿಧಿಸಬಹುದು. ಸೆಕ್ಷನ್ 206 ಎಬಿ ನಿಯಮ 192ಎ ಅಡಿಯಲ್ಲಿ ಸಂಬಳ ಪಡೆಯುವವರಿಗೆ, 194 ಬಿ ಅಡಿಯಲ್ಲಿ ಲಾಟರಿ, ಕುದುರೆ ಓಟದಲ್ಲಿ ಗೆದ್ದ ಮೊತ್ತಕ್ಕೆ ಅನ್ವಯಿಸುವುದಿಲ್ಲ.