ಬೆಂಗಳೂರು: ಸಹೋದ್ಯೋಗಿ ಯುವತಿಗೆ ಸಂಬಳ ಹೆಚ್ಚಿಸಿದ ವಿಚಾರಕ್ಕೆ ಆರಂಭವಾದ ಜಗಳ ಸಹೋದ್ಯೋಗಿ ಸೂಪರ್ ವೈಸರ್ ಹತ್ಯೆಯಲ್ಲಿ ಕೊನೆಯಾದ ಘಟನೆ ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ಕೇಶವ್ (40) ಕೊಲೆಯಾದ ದುರ್ದೈವಿ. ಶಿವಣ್ಣ ಎಂಬಾತ ಕೇಶವ್ ಎಂಬ ಸೂಪರ್ವೈಸರ್ ನನ್ನು ಹತ್ಯೆ ಮಾಡಿದ್ದಾನೆ. ಇಬ್ಬರೂ ಮಾಲ್ಗುಡಿ ಫಾರ್ಮ್ಸ್ ನಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು.
ಸಿಬ್ಬಂದಿಗಳಿಗೆ ಸಂಬಳ ಹೆಚ್ಚಳ ಮಾಡುವ ಅಧಿಕಾರವನ್ನು ಶಿವಣ್ಣ ಎಂಬ ಸೂಪರ್ವೈಸರ್ ಹೊಂದಿದ್ದರು. ಮಹಿಳಾ ಸಿಬ್ಬಂದಿಗೆ ಸಂಬಳ ಹೆಚ್ಚಳ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಶವ್ ಹಾಗೂ ಶಿವಣ್ಣ ನಡುವೆ ವಾಗ್ವಾದ, ಜಗಳ ಆರಂಭವಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳಾ ಸಿಬ್ಬಂದಿಗೆ ಸಂಬಂಳ ಹೆಚ್ಚಳ ಮಾಡಿದ್ದಾಗಿ ಕೇಶವ್ , ಶಿವಣ್ಣನನ್ನು ಬೈದಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಜಗಳ ತಾರಕಕ್ಕೇರಿದ್ದು, ಶಿವಣ್ಣ ಕೋಪದ ಬರದಲ್ಲಿ ಕೇಶವ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೇಶವ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಆರೋಪಿ ಶಿವಣ್ಣನನ್ನು ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ