
ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್ ವಿಮಾನವೊಂದರ ಹಾರಾಟ ರದ್ದಾಗಿದೆ ಎಂದು ಸಿಬ್ಬಂದಿ ವರ್ಗ ಪ್ರಯಾಣಿಕರಿಗೆ ತಿಳಿಸುತ್ತಲೇ ಈ ಚಕಮಕಿ ಆರಂಭಗೊಂಡಿದೆ. ವಿಮಾನದ ಟೇಕಾಫ್ಗೆ ಹತ್ತು ನಿಮಿಷಗಳ ಮುಂಚೆ ಈ ನೋಟಿಫೀಕೇಶನ್ ಕೊಡಲಾಗಿದೆ.
ಹೀಗೆ ದಿಢೀರನೇ ವಿಮಾನದ ಹಾರಾಟ ರದ್ದಾದ ಕಾರಣದಿಂದ ಮುಂಬಯಿಗೆ ತೆರಳಲು ಪರ್ಯಾಯ ವ್ಯವಸ್ಥೆಗಳನ್ನು ತಕ್ಷಣ ಮಾಡಿಕೊಳ್ಳಲು ಸಾಧ್ಯವಾಗದೇ ಪ್ರಯಾಣಿಕರು ಸಿಟ್ಟಿಗೆದ್ದಿದ್ದಾರೆ.
ತಮಗಾದ ಈ ಅನಾನುಕೂಲದಿಂದಾಗಿ ಪ್ರಯಾಣಿಕರು ಟ್ವಿಟರ್ನಲ್ಲಿ ತಮ್ಮ ಸಿಟ್ಟು ಕಾರಿಕೊಂಡಿದ್ದಾರೆ.
— @Rationalviews (@pramod_writes) April 12, 2023