ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ನವೆಂಬರ್ 21ರಿಂದ ಕತಾರ್ ನಲ್ಲಿ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಳ್ಳಲು ಹಾಗೂ ಇದನ್ನು ವೀಕ್ಷಿಸಲು ವಿಶ್ವದ ಮೂಲೆಮೂಲೆಗಳಿಂದ ಆಟಗಾರರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಲೈಂಗಿಕ ಕ್ರಿಯೆ ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ ಕತಾರ್ ನಲ್ಲಿ ವಿವಾಹೇತರ ಲೈಂಗಿಕ ಸಂಪರ್ಕ ಕುರಿತಂತೆ ಕಠಿಣ ಕಾನೂನು ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಆದೇಶ ಹೊರಡಿಸಲಾಗಿದೆ.
ಕೊಕೇನ್ ಮತ್ತು ಇತರ ಮಾದಕ ವಸ್ತುಗಳಿಗೂ ಕತಾರ್ ನಲ್ಲಿ ನಿಷೇಧವಿದ್ದು, ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ವಿಶ್ವಕಪ್ ಸಮಯದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದ್ದು, ಆದರೆ ಇದರ ಸೇವನೆಗೆ ಪ್ರತ್ಯೇಕ ವಲಯವನ್ನು ಆರಂಭಿಸಲಾಗುತ್ತದೆ.