ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ನಡೆಯುತ್ತಿರುವ ಕತಾರ್‌ನಲ್ಲಿ ಪ್ರೇಕ್ಷಕರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಕ್ರೀಡಾಂಗಣದಲ್ಲಿ ಬಿಯರ್ ಬಳಕೆಗೂ ಅವಕಾಶ ನೀಡಿಲ್ಲ. ಒನ್ ಲವ್ ಆರ್ಮ್ ಬ್ಯಾಂಡ್ ಧರಿಸುವುದಕ್ಕೂ ಅವಕಾಶವಿಲ್ಲ. ಹಾಗೆಯೇ ಫುಟ್‌ಬಾಲ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಹಲವು ಷರತ್ತುಗಳನ್ನು ಪಾಲಿಸುವಂತೆ ಕೇಳಿಕೊಳ್ಳಲಾಗಿದೆ.
ಈ ಮಧ್ಯೆ ಇತ್ತೀಚೆಗೆ ಪೋರ್ಚುಗಲ್ ಮತ್ತು ಉರುಗ್ವೆ ನಡುವಿನ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಮೈದಾನದಲ್ಲಿ ಪ್ರೇಕ್ಷಕರ ಗಮನ ಸೆಳೆದರು.
ಪ್ರಪಂಚ ಪ್ರಸ್ತುತ ಬರ್ನಿಂಗ್ ಇಶ್ಯೂ ಎನಿಸಿಕೊಂಡ ವಿವಿಧ ಸಂಘರ್ಷಗಳು, ಬಿಕ್ಕಟ್ಟನ್ನು ತಮ್ಮದೇ ದಾಟಿಯಲ್ಲಿ ಪ್ರಸ್ತಾಪಿಸಿದರು.
ತಮ್ಮ ಜರ್ಸಿಯಲ್ಲಿ ‘ಸೂಪರ್‌ಮ್ಯಾನ್’ ಲೋಗೋವನ್ನು ಹೊತ್ತಿದ್ದ ಆತ, ಇರಾನ್ ಮತ್ತು ಉಕ್ರೇನ್‌ಗೆ ಬೆಂಬಲ ನೀಡಲು ತಮ್ಮ ಟಿ-ಶರ್ಟ್ ಮೇಲೆ ದಪ್ಪ ಸಾಲುಗಳಲ್ಲಿ ಮುದ್ರಿಸಿದ್ದರು.
“ಉಕ್ರೇನ್ ಉಳಿಸಿ” ಎಂದು ಶರ್ಟ್ ಮುಂಭಾಗದಲ್ಲಿ ಬರೆದುಕೊಂಡಿದ್ದರೆ, ಹಿಂಭಾಗದಲ್ಲಿ “ಇರಾನಿನ ಮಹಿಳೆಗೆ ಗೌರವ ಕೊಡಿ” ಎಂಬ ಸಾಲು ಹೊಂದಿತ್ತು.
ಅವರು ಮೈದಾನದಲ್ಲಿ ಓಡಾಡಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದುಕೊಂಡರು.
https://youtu.be/Mpqppl-ILSE