ಫಿಫಾ ವಿಶ್ವಕಪ್ ಅರ್ಜೆಂಟಿನಾ ತಂಡ ಎತ್ತಿಹಿಡಿದಿದ್ದು ಸೋತ ಫ್ರಾನ್ಸ್ ನಲ್ಲಿಭಾರೀ ಗಲಭೆ ಎದ್ದಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಭಾನುವಾರ ನಡೆದ ವಿಶ್ವಕಪ್ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ 4-2 ಪೆನಾಲ್ಟಿ ಶೂಟೌಟ್ನಲ್ಲಿ ಗೆಲುವು ಸಾಧಿಸಿದ ನಂತರ ಫ್ರಾನ್ಸ್ ನಲ್ಲಿ ಗಲಭೆಗಳು ಭುಗಿಲೆದ್ದವು.
ಫ್ರೆಂಚ್ ಟೀಂ ಸೋತ ನಂತರ ಸಾವಿರಾರು ಜನರು ಬೀದಿಗಿಳಿದು ಆಕ್ರೋಶ ಹೊರಹಾಕಿದರು. ನಿನ್ನೆ ಸಂಜೆ ಫ್ರಾನ್ಸ್ ರಾಜಧಾನಿಯ ಬೀದಿಗಳಲ್ಲಿ ಸಾವಿರಾರು ಪೊಲೀಸರು ಗಸ್ತು ತಿರುಗುತ್ತಿರುವುದು ಕಂಡುಬಂದಿದೆ.
ಪ್ಯಾರಿಸ್ನ ಚಾಂಪ್ಸ್-ಎಲಿಸೀಸ್ನಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿದರು. ಫ್ರಾನ್ಸ್ ಟೀಂ ಅಭಿಮಾನಿಗಳನ್ನು ಪೊಲೀಸರು ಚದುರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.