
ಗುರುವಾರದೊಂದು ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಕ್ಯಾಮರೂನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ 1-0 ಗೋಲಿನ ಅಂತರಗಳಿಂದ ಜಯ ಸಾಧಿಸಿದೆ.
ಇಂಟ್ರಸ್ಟಿಂಗ್ ಸಂಗತಿ ಎಂದರೆ ಕ್ಯಾಮರೂನ್ ನಲ್ಲಿ ಜನಿಸಿದ ಬ್ರೀಲ್ ಎಂಬೋಲೋ ಸ್ವಿಜರ್ಲ್ಯಾಂಡ್ ಗೆಲುವಿನ ರೂವಾರಿಯಾಗಿದ್ದಾರೆ. ಅಂದರೆ ಬ್ರೀಲ್ ಎಂಬೋಲೋ ಐದು ವರ್ಷದವರಾಗಿದ್ದಾಗ ಅವರ ಕುಟುಂಬ ವಲಸೆ ಹೋಗಿದ್ದು, ಕೆಲಕಾಲ ಫ್ರಾನ್ಸ್ ನಲ್ಲಿ ನೆಲೆಸಿದ ಬಳಿಕ ಅಂತಿಮವಾಗಿ ಸ್ವಿಜರ್ಲ್ಯಾಂಡ್ ನೆಲೆಸಿದ್ದು, ಅಲ್ಲಿನ ಪೌರತ್ವ ಪಡೆದುಕೊಂಡಿದೆ.
ಹೀಗಾಗಿ ಕ್ಯಾಮರೂನ್ ನಲ್ಲಿ ಜನಿಸಿದರೂ ಈಗ ಸ್ವಿಜರ್ಲ್ಯಾಂಡ್ ಪೌರತ್ವ ಹೊಂದಿರುವ ಬ್ರಿಲ್ ಎಂಬಲೋ ಅಲ್ಲಿನ ಫುಟ್ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಸ್ವಿಜರ್ಲ್ಯಾಂಡ್ ಗೆಲುವಿನ ಗೋಲು ಹೊಡೆದರೂ ಸಹ ಅದರ ಸಂಭ್ರಮಾಚರಣೆ ಮಾಡದೆ ಕೈಯೆತ್ತಿ ನಿಂತಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.