ಮೈಸೂರು : ಮೈಸೂರಿನ ನಂಜನಗೂಡು ಬಳಿ ಕಾಡ್ಗಿಚ್ಚು ಸಂಭವಿಸಿ 50 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.
ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂಜನಗೂಡಿನ 5 ಕಿ.ಮೀ ದೂರದಲ್ಲಿರುವ ಹಂಡುವಿನಹಳ್ಳಿ ಗ್ರಾಮದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿದೆ.
150 ಎಕರೆ ಪ್ರದೇಶದಲ್ಲಿರುವ ಕುರುಚಲು ಕಾಡಿನಲ್ಲಿ ಬೆಂಕಿ ಹರಡಿದ್ದು, ಮಣ್ಣು ಮಾಫಿಯಾದವರು ಕಾಡಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ.