
ಪಾಕ್ಬರಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಸಬ್ಜಿಪುರ್ ಗ್ರಾಮದ ದೊಡ್ಡ ಮಸೀದಿಯಲ್ಲಿ ವಾಗ್ವಾದ ನಡೆದಿದೆ.
ಜಗಳಕ್ಕೆ ಕಾರಣವಾದ ಅಂಶಗಳೇನು ಎಂಬುದು ಸ್ಪಷ್ಟವಾಗಿಲ್ಲ ಮತ್ತು ಸಂಘರ್ಷವನ್ನು ಪ್ರಚೋದಿಸಿದ ಬಗ್ಗೆ ಯಾವುದೇ ದೃಢೀಕೃತ ಮಾಹಿತಿಯಿಲ್ಲ. ಆದರೆ ಗಲಾಟೆಯಲ್ಲಿ ಭಾಗವಹಿಸಿದವರ ನಡುವೆ ದೈಹಿಕ ಹಲ್ಲೆಗೆ ಕಾರಣವಾದ ವಾಗ್ವಾದ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ.
ಮಸೀದಿಯೊಳಗೆ ಎರಡು ಗುಂಪುಗಳು ಭೀಕರ ಜಗಳದಲ್ಲಿ ತೊಡಗಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಬೆಲ್ಟ್ , ಕೋಲಿನಿಂದ ಎದುರಾಳಿಗಳನ್ನು ಹೊಡೆಯಲಾಗಿದೆ. ಹಿಂಸಾಚಾರದಲ್ಲಿ ಪರಸ್ಪರ ಬಟ್ಟೆಹಿಡಿದು ಎಳೆದಾಡಿ ಅವುಗಳನ್ನು ಹರಿದುಹಾಕಿ ಬಡಿದಾಡಿಕೊಂಡಿದ್ದಾರೆ.