ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ ದೇಶ ಸಹಜ ಸ್ಥಿತಿಗೆ ಬರಲು ಇನ್ನೂ ಸಮಯ ಬೇಕು. ಅಲ್ಲಿಯವರೆಗೆ ಮಾಸ್ಕ್ ಅನಿವಾರ್ಯವಾಗಿದೆ. ಆದ್ರೆ ವಿಶ್ವದ ಅನೇಕ ದೇಶಗಳಲ್ಲಿ ಮಾಸ್ಕ್ ಅನಿವಾರ್ಯತೆಯನ್ನು ತೆಗೆದು ಹಾಕಲಾಗಿದೆ.
ಇಸ್ರೇಲ್ ನಲ್ಲಿ ಮಾಸ್ಕ್ ಅನಿವಾರ್ಯತೆಯನ್ನು ತೆಗೆಯಲಾಗಿದೆ. ಇಸ್ರೇಲ್ ನಲ್ಲಿ ಕಳೆದ ವರ್ಷ ಡಿಸೆಂಬರ್ 20ರಲ್ಲಿ ಕೊರೊನಾ ಲಸಿಕೆ ಅಭಿಯಾನ ಶುರುವಾಗಿತ್ತು. ವಿಶ್ವದಲ್ಲಿ ಅತಿ ವೇಗದಲ್ಲಿ ಲಸಿಕೆ ಹಾಕಿದ ದೇಶಗಳ ಪಟ್ಟಿಗೆ ಇಸ್ರೇಲ್ ಸೇರಿದೆ. ಇಸ್ರೇಲ್ ನಲ್ಲಿ ಕೋವಿಡ್ ಸೋಂಕಿನ ಒಟ್ಟು 8,39,000 ಪ್ರಕರಣಗಳು ದಾಖಲಾಗಿದ್ದು, 6,392 ಮಂದಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಸಾರಿಗೆ ಮತ್ತು ವಿಮಾನದಲ್ಲಿ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ.
ಭೂತಾನ್ ನಲ್ಲಿಯೂ ಲಸಿಕೆ ಅಭಿಯಾನ ಚುರುಕಾಗಿದೆ. ಕೇವಲ ಎರಡೇ ವಾರದಲ್ಲಿ ಶೇಕಡಾ 90ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಹಾಗಾಗಿ ಇಲ್ಲಿಯೂ ಲಸಿಕೆ ಅನಿವಾರ್ಯತೆಯನ್ನು ತೆಗೆದುಹಾಕಲಾಗಿದೆ.
ಹವಾಯಿಯಲ್ಲಿ ಕೂಡ ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅಲ್ಲಿಯೂ ಕೊರೊನಾ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ದೇಶದ ಬಹುತೇಕ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ಲಸಿಕೆ ಹಾಕದ ಜನರು ಮನೆಯಲ್ಲೂ ಮಾಸ್ಕ್ ಧರಿಸಬೇಕೆಂದು ಅಲ್ಲಿನ ಸರ್ಕಾರ ಸೂಚಿಸಿದೆ.
ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿದ್ದ ಚೀನಾದಲ್ಲೂ ಮಾಸ್ಕ್ ಧರಿಸುವ ಅನಿವಾರ್ಯತೆಯಿಲ್ಲ. ಅಲ್ಲಿನ ಎಲ್ಲ ಜನರಿಗೆ ಲಸಿಕೆ ಹಾಕಲಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ಆಸ್ಪತ್ರೆಯಲ್ಲಿ ಮಾತ್ರ ಮಾಸ್ಕ್ ಧರಿಸಲಾಗ್ತಿದೆ.