ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಕಾಣಿಸಿಕೊಂಡಿದ್ದು, ಮಕ್ಕಳಲ್ಲಿ ಕೆಮ್ಮು, ನೆಗಡಿ, ಕಫ, ಜ್ವರ ಕಾಣಿಸಿಕೊಳ್ಳುತ್ತಿದೆ. ನ್ಯುಮೋನಿಯಾ, ಡಿಂಘಿ, ಅಸ್ತಮಾ, ಬ್ರಾಂಕೈಟಿಸ್, ಉಸಿರಾಟದ ಸಮಸ್ಯೆಯಿಂದ ಹೆಚ್ಚಿನ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ಪ್ರತಿ 100 ಮಕ್ಕಳ ಪೈಕಿ 50 ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 100 ಮಕ್ಕಳಲ್ಲಿ 25ರಿಂದ 30 ಮಕ್ಕಳಿಗೆ ಆಕ್ಸಿಜನ್ ಬೆಡ್ ಬೇಡಿಕೆ ಇದೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಉಸಿರಾಟದ ಸಮಸ್ಯೆಯನ್ನು ಪುಟ್ಟ ಮಕ್ಕಳು ಎದುರಿಸುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್ ಗಳು ಭರ್ತಿಯಾಗ್ತಿವೆ ಎಂದು ಹೇಳಲಾಗಿದೆ.