ಅತ್ಯಂತ ಅಪರೂಪದ “ಭ್ರೂಣದಲ್ಲಿ ಭ್ರೂಣ” ಕೇಸೊಂದು ಇಸ್ರೇಲ್ನಲ್ಲಿ ಪತ್ತೆಯಾಗಿದೆ. ಅಂದರೆ ತಾಯಿಯ ಗರ್ಭದಲ್ಲಿ ಇರುವ ಭ್ರೂಣವೊಂದರ ಹೊಟ್ಟೆಯೊಳಗೆ ಇನ್ನೊಂದು ಭ್ರೂಣ ಪತ್ತೆಯಾಗಿದೆ!
ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ಹುಟ್ಟಬೇಕಿತ್ತು. ಆದರೆ ಈ ಅವಳಿ ಮಕ್ಕಳನ್ನು ಒಂದು ಮಗು ಇನ್ನೊಂದು ಮಗುವಿನ ಹೊಟ್ಟೆಯೊಳಗೆ ಇರುವ ಭಯಾನಕ ದೃಶ್ಯವನ್ನು ವೈದ್ಯರು ಅಲ್ಟ್ರಾಸೌಂಡ್ ಸಮಯದಲ್ಲಿ ಕಂಡುಕೊಂಡಿದ್ದಾರೆ. ಅಲ್ಟ್ರಾಸೌಂಡ್ ಮತ್ತು ಎಕ್ಸ್-ಕಿರಣಗಳನ್ನು ಒಳಗೊಂಡಿರುವ ಪರೀಕ್ಷೆಯಲ್ಲಿ ಹೆಣ್ಣು ಮಗುವಿನ ಹೊಟ್ಟೆಯೊಳಗೆ ಭಾಗಶಃ ಅಭಿವೃದ್ಧಿ ಹೊಂದಿದ ಭ್ರೂಣವನ್ನು ಹೊಂದಿದೆ ಎಂದು ತೋರಿಸಿದೆ.
ಈ ಸ್ಥಿತಿಯು ಸುಮಾರು 5 ಲಕ್ಷ ಜನನಗಳಲ್ಲಿ 1 ರಲ್ಲಿ ಕಂಡುಬರುತ್ತದೆ ಮತ್ತು ಇದು ಅತ್ಯಂತ ಅಪರೂಪ ಎಂದು ವೈದ್ಯರು ಹೇಳಿದ್ದಾರೆ. ಸ್ಥಿತಿಯ ಮೂಲ ಕಾರಣ ಸ್ಪಷ್ಟವಾಗಿಲ್ಲ. ಆದಾಗ್ಯೂ, ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಇದು ಅಪರೂಪದ “ಪರಾವಲಂಬಿ ಅವಳಿ” ಆಗಿರಬಹುದು ಎಂದು ಹೇಳಿದ್ದಾರೆ. ಬಾಲಕಿಯ ಹೊಟ್ಟೆಯಿಂದ ಎರಡು ರೀತಿಯ ಚೀಲಗಳನ್ನು ತೆಗೆದುಹಾಕಲಾಗಿದೆ. ಭ್ರೂಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.