ಬೆಂಗಳೂರು: ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು, ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ.
ಗಣೇಶ ಚತುರ್ಥಿ ಅಂಗವಾಗಿ ವಿಶೇಷ ರೈಲುಗಳನ್ನು ನೈರುತ್ಯ ರೈಲ್ವೆ ಓಡಿಸಲಿದೆ. ಎಸ್ಎಂಇಟಿ ಬೆಂಗಳೂರು- ಕಲಬುರಗಿ ರೈಲು ಸೆಪ್ಟೆಂಬರ್ 5 ರಿಂದ 7 ರವರೆಗೆ ಸಂಚರಿಸಲಿದೆ. ಕಲಬುರಗಿ – ಎಸ್.ಎಂ.ವಿ.ಟಿ. ಬೆಂಗಳೂರು ರೈಲು ಸೆಪ್ಟೆಂಬರ್ 6ರಿಂದ 8ರವರೆಗೆ ಸಂಚರಿಸಲಿದೆ.
ದಸರಾ ಹಬ್ಬದ ವಿಶೇಷವಾಗಿ ಎಸ್ಎಂವಿಟಿ ಬೆಂಗಳೂರು -ವಿಜಯಪುರ ರೈಲು ಅಕ್ಟೋಬರ್ 9ರಿಂದ 12ರವರೆಗೆ, ವಿಜಯಪುರ -ಎಸ್ಎಂವಿಟಿ ಬೆಂಗಳೂರು ಅ. 10ರಿಂದ 13ರವರೆಗೆ, ಯಶವಂತಪುರ -ಬೆಳಗಾವಿ ರೈಲು ಅಕ್ಟೋಬರ್ 10, ಯಶವಂತಪುರ -ಬೆಳಗಾವಿ ರೈಲು ಅಕ್ಟೋಬರ್ 12, ಬೆಳಗಾವಿ -ಯಶವಂತಪುರ ರೈಲು ಅಕ್ಟೋಬರ್ 13, ಮೈಸೂರು -ಕೆಎಸ್ಆರ್ ಬೆಂಗಳೂರು ರೈಲು ಅಕ್ಟೋಬರ್ 10 ರಿಂದ 14, ಕೆಎಸ್ಆರ್ ಬೆಂಗಳೂರು -ಮೈಸೂರು ರೈಲು ಅಕ್ಟೋಬರ್ 9ರಿಂದ 13ರವರೆಗೆ ಸಂಚರಿಸಲಿದೆ.
ದೀಪಾವಳಿ ಹಬ್ಬದ ವಿಶೇಷವಾಗಿ ಯಶವಂತಪುರ -ಬೆಳಗಾವಿ ರೈಲು ಅಕ್ಟೋಬರ್ 30, ಯಶವಂತಪುರ -ಬೆಳಗಾವಿ ರೈಲು ಅಕ್ಟೋಬರ್ 31, ಯಶವಂತಪುರ -ಬೆಳಗಾವಿ ರೈಲು ನವೆಂಬರ್ 1, ಬೆಳಗಾವಿ -ಯಶವಂತಪುರ ರೈಲು ನವೆಂಬರ್ 3ರಂದು ಸಂಚರಿಸಲಿದೆ.