ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯ ಜನರು ಊರಿಗೆ ಪ್ರಯಾಣ ಬೆಳೆಸಿದ್ದು, ಬಸ್ ನಿಲ್ದಾಣ, ಬಸ್ ಸೇರಿದಂತೆ ಪ್ರಯಾಣಿಕರ ವಾಹನಗಳಲ್ಲಿ ಜನದಟ್ಟಣೆ ಕಂಡು ಬಂದಿದೆ.
ಅದೇ ರೀತಿ ದೀಪಾವಳಿ ಹಬ್ಬದ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಟ್ಟೆ, ಮಣ್ಣಿನ ಹಣತೆ, ಹಸಿರು ಪಟಾಕಿ, ಹೂವು, ಹಣ್ಣು, ಬಾಳೆಕಂದು, ಬೂದಗುಂಬಳ, ನಿಂಬೆ, ಮಾವಿನ ಸೊಪ್ಪು ಸೇರಿದಂತೆ ಹಬ್ಬದ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.
ಮಾರುಕಟ್ಟೆಗಳಲ್ಲಿ ಭಾರಿ ಸಂಖ್ಯೆಯ ಜನ ಖರೀದಿಗೆ ಮುಗಿಬಿದ್ದಿದ್ದು, ದೈಹಿಕ ಅಂತರ ಇಲ್ಲವಾಗಿದೆ. ಬಹುತೇಕರು ಮಾಸ್ಕ್ ಹಾಕದೇ ಖರೀದಿಯಲ್ಲಿ ತೊಡಗಿದ್ದಾರೆ. ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಪಟಾಕಿ ಸಿಡಿಸುವುದರಿಂದ ಅಪಾಯದ ಎಚ್ಚರಿಕೆ ನೀಡಲಾಗಿದೆ. ಚಳಿಯ ವಾತಾವರಣ ಕೂಡ ಇರುವುದರಿಂದ ಕೊರೋನಾ ಹೆಚ್ಚುವ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.