ಕೆಟ್ಟ ಜೀವನ ಪದ್ಧತಿ ಮತ್ತು ಒತ್ತಡ, ಶಾರೀರಿಕ ಸಂಬಂಧದ ಮೇಲೂ ಪರಿಣಾಮ ಬೀರ್ತಿದೆ. ಮನೆ, ಮಕ್ಕಳ ಕೆಲಸದಲ್ಲಿ ಮಹಿಳೆಯರು ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥವೊಂದು ಮಹಿಳೆಯರ ಸೆಕ್ಸ್ ಜೀವನ ಉತ್ತಮಗೊಳಿಸಲು ನೆರವಾಗಲಿದೆ.
ಅಡುಗೆ ಮನೆಯಲ್ಲಿರುವ ಮೆಂತ್ಯ, ಮಹಿಳೆಯರ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೆಂತ್ಯ ಸೇವನೆಯಿಂದ ಶೇಕಡಾ 42ರಷ್ಟು ಮುಟ್ಟಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಧ್ಯಯನವೊಂದು ಹೇಳಿದೆ. ಶಾರೀರಿಕ ಸಂಬಂಧದ ವೇಳೆ ಶುಷ್ಕತೆ, ನೋವು ಕಾಣಿಸಿಕೊಳ್ಳುವವರಿಗೂ ಮೆಂತ್ಯ ಪರಿಹಾರವಾಗಿದೆ. ದಿನಕ್ಕೆ 500 ಮಿಲಿಗ್ರಾಂ ಮೆಂತ್ಯ ಸೇವನೆ ಮಾಡಬೇಕು.
ಅಧ್ಯಯನದಲ್ಲಿ ಭಾರತದ 48ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಮಹಿಳೆಯರಿಗೆ ದಿನಕ್ಕೆ ಎರಡು ಬಾರಿ ಶುದ್ಧ ಮೆಂತ್ಯದಿಂದ ಮಾಡಿದ ಕಷಾಯ ಸೇವನೆಗೆ ಸಲಹೆ ನೀಡಿದ್ದರು. ಮೆಂತ್ಯ ಸೇವನೆ ಮಾಡದಿರುವ ಮಹಿಳೆಯರಿಗಿಂತ ಮೆಂತ್ಯ ಸೇವನೆ ಮಾಡಿದ ಮಹಿಳೆಯರ ಸೆಕ್ಸ್ ಲೈಫ್ ನಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತ್ತು. ಮೆಂತ್ಯ, ಮಹಿಳೆಯರ ಹಾರ್ಮೋನ್ಸ್ ಸರಿಪಡಿಸುತ್ತದೆ. ಟೆಸ್ಟೋಸ್ಟೆರಾನ್ ಮತ್ತು ಎಸ್ಟ್ರಾಡಿಯೋಲ್ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಮೆಂತ್ಯ, ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ನಯಗೊಳಿಸುವಿಕೆ, ರಕ್ತದ ಹರಿವನ್ನೂ ಇದು ಸರಿ ಮಾಡುತ್ತದೆ. ಮೆಂತ್ಯ ಉರಿಯೂತವನ್ನು ಕಡಿಮೆ ಮಾಡುತ್ತದೆ.