ಚೆನ್ನೈ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಲ್ಲಿ ಭಾರಿ ಮಳೆ, ಭೂಕುಸಿತ ಸಂಭವಿಸುತ್ತಿದೆ. ಪುಡುಚೆರಿಯಲ್ಲಿ ವರುಣಾರ್ಭಟದಿಂದಾಗಿ ಪ್ರವಾಹಸ್ಥಿತಿ ನಿರ್ಮಣವಾಗಿದೆ.
ಚಂಡಮಾರುತ ತಮಿಳುನಡಿನಾದ್ಯಂತ ಅನಾಹುತ ಸೃಷ್ಟಿಸಿದೆ. ತಿರುವಣ್ಣಾಮಲೈನಲ್ಲಿ ಭಾರಿ ಭೂಕುಸಿತ ಸಂಭವಿಸಿಇದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಅವಶೇಷಗಳ ಅಡಿಯಲ್ಲಿ ಮಕ್ಕಳು ಸೇರಿ 7 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚನ್ನೈನಲ್ಲಿ ಮಳೆ ಅವಾಂತರದಿಂದಾಗಿ ಬಡಾವಣೆಗಳು ಜಲಾವೃತಗೊಂಡಿವೆ. ತಿರುವಳ್ಳೂರು, ಚೆಂಗಲ್ಪೆಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲುಕುರುಚಿ, ಕಡಲೂರು ಜಿಲ್ಲೆಗಳಲ್ಲಿ ಅತು ಹೆಚ್ಚು ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಪುದುಚೆರಿಯಲ್ಲಿ 30 ವರ್ಷಗಳಲ್ಲಿಯೇ ಕಂದರಿಯದ ರಣಭೀಕರ ಮಳೆಯಾಗುತ್ತಿದ್ದು, ಪುದುಚೆರಿಗೆ ಮುಳುಗಡೆ ಭೀತಿ ಎದುರಾಗಿದೆ. ಪುದುಚೆರಿಯಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡು, ದಕ್ಷಿಣ ಆಂಧ್ರ, ಕೇರಳ, ಕರ್ನಾಟಕದ ಒಳ್ನಡಿನ ಕೆಲ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.