ಅಮೆರಿಕಾದ ಪ್ರಸಿದ್ಧ ಎಲೈಟ್ ಶಾಲೆ ಶಿಕ್ಷಕಿಗೆ ಜೈಲು ಶಿಕ್ಷೆಯಾಗಿದೆ. 38 ವರ್ಷದ ಶಿಕ್ಷಕಿ, ಅಪ್ರಾಪ್ತ ವಿದ್ಯಾರ್ಥಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಆರೋಪದ ಮೇಲೆ ಜೈಲು ಸೇರಿದ್ದಾಳೆ. ಆಕೆ ಮೊಬೈಲ್ ನಲ್ಲಿ ವಿದ್ಯಾರ್ಥಿಯ ಅಶ್ಲೀಲ ವಿಡಿಯೋ, ಫೋಟೋ ಸಿಕ್ಕಿದೆ.
ಫ್ಲೋರಿಡಾ ಬೋರ್ಡಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ಈ ಶಾಲೆ ಉನ್ನತ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯ ವಾರ್ಷಿಕ ಶುಲ್ಕ 60 ಲಕ್ಷವಿದೆ. ಶಿಕ್ಷಕಿ ಟೇಲರ್ ಜೆ ಆಂಡರ್ಸನ್, ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಳಂತೆ. ಕಾರಿನಲ್ಲಿ ಶಿಕ್ಷಕಿ, ಶಾರೀರಿಕ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ.
ಶಿಕ್ಷಕಿ-ವಿದ್ಯಾರ್ಥಿ ಜೊತೆ ಸಂಬಂಧವಿದೆ ಎಂಬ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಈ ಬಗ್ಗೆ ಪ್ರಾಂಶುಪಾಲರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ವಿದ್ಯಾರ್ಥಿ ಸತ್ಯ ಬಾಯ್ಬಿಟ್ಟಿದ್ದಾನೆ. ಶಾಲೆ ಆಡಳಿತ ಮಂಡಳಿ, ವಿದ್ಯಾರ್ಥಿ ಪಾಲಕರನ್ನು ಸಂಪರ್ಕಿಸಿತ್ತು. ಇಬ್ಬರೂ, ಇನ್ಸ್ಟಾಗ್ರಾಮ್ ಮೂಲಕ ಮೊದಲು ಸಂಪರ್ಕಕ್ಕೆ ಬಂದಿದ್ದರು. ಸ್ಯಾಪ್ಚ್ಯಾಟ್ ಮೂಲಕ ಮಾತುಕತೆ ನಡೆಸಲು ಶುರು ಮಾಡಿದ್ದರು. ಈ ಹಿಂದೆ, ಸಾಮಾಜಿಕ ಜಾಲತಾಣದ ಮೂಲಕ ಅನೇಕ ವಿದ್ಯಾರ್ಥಿಗಳನ್ನು ಶಿಕ್ಷಕಿ ಭೇಟಿಯಾಗಲು ಮುಂದಾಗಿದ್ದಳು ಎನ್ನಲಾಗಿದೆ.
ಹಿಂದಿನ ಸೋಮವಾರ, ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದರು. ಶಾಲೆ, ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಿದೆ.