ತಿರುವನಂತಪುರಂ: ನೀಟ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಒಳ ಉಡುಪುಗಳನ್ನು ತೆಗೆದು ಪರೀಕ್ಷೆಗೆ ತೆರಳುವಂತೆ ಪರೀಕ್ಷಾ ಮೇಲ್ವಿಚಾರಕ ಸೂಚಿಸಿದ ಘಟನೆ ಕೇರಳದ ಮಾರ್ಥೋಮಾ ಇನ್ಸ್ ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಸೆಂಟರ್ ನಲ್ಲಿ ನಡೆದಿದೆ.
ಒಳ ಉಡುಪುಗಳನ್ನು ತೆಗೆದು ಪರೀಕ್ಷೆ ಬರೆಯುವಂತೆ ಪರೀಕ್ಷಾ ಸಿಬ್ಬಂದಿ ಸೂಚಿಸಿದರು ಎಂದು ನೀಟ್ ಪರೀಕ್ಷೆಗೆ ಹಾಜರಾದ ಯುವತಿ ಪರೀಕ್ಷಾ ಮೇಲ್ವಿಚಾರಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪರೀಕ್ಷಾ ಮೇಲ್ವಿಚಾರಕನ ನಡೆಗೆ ಯುವತಿ ಆಘಾತಗೊಂಡಿದ್ದಾಳೆ.
ಈ ಬಗ್ಗೆ ಯುವತಿ ತನ್ನ ಪೋಷಕರ ಬಳಿ ಹೇಳಿದ್ದು, ಇದೀಗ ಯುವತಿಯ ಪೋಷಕರು ನೀಟ್ ಪರೀಕ್ಷಾ ಮೇಲ್ವಿಚಾರಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷಾ ಮೇಲ್ವಿಚಾರಕನ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.