ಅಫ್ಘಾನಿಸ್ತಾನದಲ್ಲಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಕಾಬೂಲ್ನಲ್ಲಿ ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್ ಮಾಡಬೇಕೆಂದು ಆಗ್ರಹಿಸಿ ಮಹಿಳೆಯರ ಮತ್ತೊಂದು ದಂಡು ಆಗ್ರಹಿಸಿದ ಅಭಿಯಾನಕ್ಕೆ ಮುಂದಾಗಿದೆ.
ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಾಬೂಲ್ನ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಶಾಂತಿಯುತವಾಗಿ ರ್ಯಾಲಿ ನಡೆಸುತ್ತಿರುವ ಈ ಘಟನೆಯನ್ನು ಬಿತ್ತರ ಮಾಡಲು ಪತ್ರಕರ್ತರಿಗೆ ಮುಕ್ತ ಆಹ್ವಾನ ನೀಡಲಾಗಿತ್ತು.
ವೃದ್ಧೆ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು..!
ಪುರುಷರು ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ತರಗತಿಗಳನ್ನು ಇಟ್ಟುಕೊಳ್ಳುವ ಆಲೋಚನೆಗೆ ಬೆಂಬಲ ನೀಡುತ್ತಿರುವ ರ್ಯಾಲಿನಿರತ ಮಹಿಳೆಯರು, ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ ನಿರ್ಮಾಣಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ತಾಲಿಬಾನ್ ನಾಯಕತ್ವಕ್ಕೆ ಬೆಂಬಲ ಕೊಟ್ಟು, ಕುಂದುಜ಼್ ಪ್ರಾಂತ್ಯದಲ್ಲಿ ನೂರಾರು ಮಹಿಳೆಯರು ರ್ಯಾಲಿ ಹಮ್ಮಿಕೊಂಡಿದ್ದರು.