ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದ ವೇಳೆ ಕುಡಿದ ಅಮಲಿನಲ್ಲಿ ಯುವತಿಯೊಬ್ಬರನ್ನು ಅನುಚಿತವಾಗಿ ಹಿಡಿದು ಮುತ್ತು ಕೊಡಲು ಯತ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಇತ್ತೀಚೆಗೆ ಪರಿಚಯಿಸಲಾದ ಪಿಂಕ್ ಮೊಬೈಲ್ ವ್ಯಾನ್‌ನಲ್ಲಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತನಿಯಾ ರಾಯ್ ಇಂತಹ ದುರ್ವರ್ತನೆ ತೋರಿದವರಾಗಿದ್ದಾರೆ.
ಬುಧವಾರ ರಾತ್ರಿ ಆಕೆ ಅನುಚಿತವಾಗಿ ವರ್ತಿಸಿ ಇಬ್ಬರು ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋ ವೀಕ್ಷಿಸಿದರೆ ಮಹಿಳಾ ಪೊಲೀಸ್ ಮದ್ಯ ಸೇವಿಸಿದಂತೆ ಕಂಡು ಬರುತ್ತಿದ್ದು, ಆಕೆ ತನ್ನ ಮುಂದಿದ್ದ ಯುವತಿಯನ್ನು ಚುಂಬಿಸಲು ಸಮೀಪಿಸುತ್ತಾಳೆ. ಈ ದುರ್ವರ್ತನೆ ಈಗ ಆಕ್ರೋಶಕ್ಕೆ ಕಾರಣವಾಗಿದೆ
ಕರ್ತವ್ಯ ನಿರತ ಅಧಿಕಾರಿ ರಾಯ್ ಮಹಿಳೆಯ ಕತ್ತು ಹಿಡಿದು ಆಕೆಯನ್ನು ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಘಟನೆಯ ಸಮಯದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊವು ಯುವತಿಯನ್ನು ಅವರು ಚುಂಬಿಸುತ್ತಿರುವುದನ್ನು ತೋರಿಸಿದೆ.
ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಘಟನೆ ಮುನ್ನೆಲೆಗೆ ಬಂದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಲು ನೇಮಕಗೊಂಡ ಸಮವಸ್ತ್ರಧಾರಿ ಅಧಿಕಾರಿಯೇ ಇಂತಹ ವರ್ತನೆ ತೋರಿರುವುದು ಟೀಕೆಗೆ ಗುರಿಯಾಗಿದೆ.
“ಇದು ನಾಚಿಕೆಗೇಡಿನ ಸಂಗತಿ …… ಪೋಲೀಸರ ಪರಿಸ್ಥಿತಿ ಏನು,” ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದರೆ, ಇನ್ನೊಬ್ಬರು “OMG. ಯಾವಾಗ ಶಿಕ್ಷೆ” ಎಂದು ಪ್ರಶ್ನಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಮಿಕ್ ಭಟ್ಟಾಚಾರ್ಯ, ಘಟನೆ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಸ್ಥಿತಿಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. ಭಟ್ಟಾಚಾರ್ಯ ತಮ್ಮ ಪೋಸ್ಟ್‌ನಲ್ಲಿ, “ಸಿಲಿಗುರಿ ಮೆಟ್ರೋಪಾಲಿಟನ್ ಪೊಲೀಸ್‌ನ ಪಿಂಕ್ ವ್ಯಾನ್ ಪಡೆಯ ಎಎಸ್‌ಐ ತಾನ್ಯಾ ರಾಯ್ ಅವರು ಕುಡಿದು ಜೂಜಿನ ಅಡ್ಡೆಯನ್ನು ಧ್ವಂಸಗೊಳಿಸಿದ್ದಾರೆ ಜೊತೆಗೆ ಅಲ್ಲಿದ್ದ ಯುವತಿಯನ್ನು ಅಸಹಜ ರೀತಿಯಲ್ಲಿ ಹಿಡಿದುಕೊಂಡಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಅಪ್ರಾಪ್ತರನ್ನು ಥಳಿಸುವಲ್ಲಿ ಈ ಅಧಿಕಾರಿಯೂ ಭಾಗಿಯಾಗಿದ್ದಾರೆ. ಆಗ ಪೊಲೀಸ್ ವ್ಯಾನ್ ಸಮೀಪಿಸಿದಾಗ ಅಪ್ರಾಪ್ತರಾದ ಬಾಲಕಿ ಮತ್ತು ಹುಡುಗ ಸುಮ್ಮನೆ ನಿಂತು ಮಾತನಾಡುತ್ತಿದ್ದರು ಎಂದು ವರದಿಯಾಗಿದೆ. ಇದೀಗ, ಅಪ್ರಾಪ್ತರೊಬ್ಬರ ತಾಯಿ ರಾಯ್ ವಿರುದ್ಧ ದೌರ್ಜನ್ಯ ಮತ್ತು ಹಲ್ಲೆ ಆರೋಪ ಮಾಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.