ಉದ್ದ ಕೂದಲು ಕಾಪಾಡಿಕೊಳ್ಳುವುದು ಬಲು ಸವಾಲಿನ ಕೆಲಸ. ಅಮೆರಿಕದ ಮಹಿಳೆಯೊಬ್ಬರು 17 ವರ್ಷಗಳ ಕಾಲ ಬೆಳೆಸಿ 6 ಅಡಿಯಷ್ಟು ಉದ್ದ ಮಾಡಿಕೊಂಡ ಕೂದಲನ್ನು ಒಳ್ಳೆಯ ಉದ್ದೇಶವೊಂದಕ್ಕಾಗಿ ಕಟ್ ಮಾಡಿಸಿಕೊಂಡಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶವನ್ನೂ ಸಹ ಇದೇ ವೇಳೆ ಈಕೆ ಹೊಂದಿದ್ದರು.
ʼಮೆಹಂದಿʼಗೆ ಇದನ್ನು ಸೇರಿಸಿ ಕೂದಲಿಗೆ ಹಚ್ಚಿ ಹೆಚ್ಚಿನ ಲಾಭ ಪಡೆಯಿರಿ
ಉತ್ತರ ವರ್ಜೀನಿಯಾದ ಜ಼ಹಾಬ್ ಕಮಾಲ್ ಖಾನ್ ಹೆಸರಿನ ಈಕೆ ತಮ್ಮ ಸೊಂಪಾದ ಕೂದಲನ್ನು ಕ್ಯಾಮೆರಾಗಳ ಮುಂದೆಯೇ ಕಟ್ ಮಾಡಿಸಿದ್ದು, ’ಚಾರಿಟಿ ಕೆಲಸವೊಂದಕ್ಕೆ ವೈಯಕ್ತಿಕ ಮಟ್ಟದಲ್ಲಿ ಅತಿ ಹೆಚ್ಚು ಪ್ರಮಾಣದ ಕೂದಲು ದಾನ ಮಾಡಿದ ವ್ಯಕ್ತಿ’ ಎಂಬ ಗಿನ್ನೆಸ್ ದಾಖಲೆಯತ್ತ ಕಣ್ಣಿಟ್ಟಿದ್ದಾರೆ.
ಪಾಕಿಸ್ತಾನ ಮೂಲದ 30 ವರ್ಷ ವಯಸ್ಸಿನ ಈ ಮಹಿಳೆ ತಮ್ಮ 13ನೇ ವಯಸ್ಸಿನಲ್ಲಿ ಕಡೆಯ ಬಾರಿಗೆ ಹೇರ್ ಕಟ್ ಮಾಡಿಸಿದ್ದರು ಎಂದು ʼದಿ ವಾಶಿಂಗ್ಟನ್ ಪೋಸ್ಟ್ʼ ವರದಿ ಮಾಡಿದೆ.
ವೃತ್ತಿಪರ ಸ್ಕ್ವಾಶ್ ಆಟಗಾರ್ತಿಯಾದ ಖಾನ್, ಕೂದಲು ಉದುರುವಿಕೆ ಸಮಸ್ಯೆ ಇರುವ ಮಕ್ಕಳಿಗಾಗಿ ದಾನ ಮಾಡಿದ್ದು, ಅವರಿಗೆ ಉಚಿತವಾಗಿ ವೈದ್ಯಕೀಯವಾಗಿ ಕೂದಲು ಕಸಿ ಮಾಡುವ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ.