ಬೆಂಗಳೂರು : ಬೆಂಗಳೂರಿನಲ್ಲಿ ಮುಂದಿನ ವರ್ಷ ಫೆ. 12 ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಯುವ ಕನ್ನಡಿಗರ ಕೌಶಲ್ಯಗಳಿಗೆ ತಕ್ಕ ಉದ್ಯೋಗ ಒದಗಿಸುವ, ರಾಜ್ಯದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ನಿಟ್ಟಿನಲ್ಲಿ “ಗೇಮ್ ಚೇಂಜರ್” ಆಗಬಹುದೆಂಬ ನಿರೀಕ್ಷೆಯಿರುವ “ಜಾಗತಿಕ ಹೂಡಿಕೆದಾರರ ಸಮಾವೇಶ – 2025” ಮುಂದಿನ ವರ್ಷ ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ರಾಜಧರ್ಮ. ನಾವು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಕೊಟ್ಟು ರಾಜಧರ್ಮ ಪಾಲಿಸಿದ್ದೇವೆ. ವಚನ ಪಾಲನೆ ನಮ್ಮ ಆದ್ಯತೆ ಮಾತ್ರವಲ್ಲ, ಬದ್ಧತೆಯೂ ಹೌದು. ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು
ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಯುತ್ತಾ ಹೋಗಬೇಕು
ವ್ಯಕ್ತಿಯೊಬ್ಬ ಶಿಕ್ಷಿತನಾಗುತ್ತ ಹೋದಂತೆ ಆತನಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಯುತ್ತಾ ಹೋಗಬೇಕು. ಆದರೆ ಶಿಕ್ಷಣ ಪಡೆದವರಲ್ಲೇ ಹೆಚ್ಚು ಮೌಢ್ಯ, ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಕಾಣುತ್ತಿರುವುದು ಇಂದಿನ ಕಾಲದ ದುರಂತ. ಮಕ್ಕಳು ಜಾತಿ ಪದ್ಧತಿಯಿಂದ ನಿರ್ಮಾಣವಾಗಿರುವ ಅಸಮಾನತೆಯಿಂದ ಹೊರಬಂದು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದರು.