ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಕಾವೇರಿ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾಗಮಂಡಲ, ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳದಲ್ಲಿ, ಕಾವೇರಿಗೆ ಎರಡು ಉಪನದಿಗಳು ಬಂದು ಸೇರಿಕೊಳ್ಳುತ್ತವೆ; ಕನ್ನಿಕೆ ಮತ್ತು ಕಾಲ್ಪನಿಕ ನದಿಯಾದ ಸುಜ್ಯೋತಿ. ಭಗಂಡೇಶ್ವರ ಕ್ಷೇತ್ರ ಎಂಬ ಹೆಸರೂ ಇಲ್ಲಿಗಿದೆ. ಕೊಡಗಿನ ತ್ರಿವೇಣಿ ಸಂಗಮ ಎಂದೂ ಪ್ರಸಿದ್ಧಿ ಪಡೆದಿದೆ. ಭಕ್ತರು ಇಲ್ಲಿ ಮಿಂದೇ ತಲಕಾವೇರಿಯತ್ತ ಪ್ರಯಾಣ ಬೆಳೆಸುತ್ತಾರೆ
ಟಿಪ್ಪು ಸುಲ್ತಾನ ಇದನ್ನು ಅತಿಕ್ರಮಿಸಿಕೊಂಡ ಬಳಿಕ ಭಾಗಮಂಡಲವನ್ನು ಅಫ್ಸಲಾಬಾದ್ ಎಂಬುದಾಗಿ ಮರು-ನಾಮಕರಣ ಮಾಡಿದ. 1790ರಲ್ಲಿ ದೊಡ್ಡ ವೀರ ರಾಜೇಂದ್ರ ರಾಜನು ಭಾಗಮಂಡಲವನ್ನು ಒಂದು ಸ್ವತಂತ್ರ ಕೊಡಗು ರಾಜ್ಯದೊಳಗೆ ಮರಳಿ ಪಡೆದ. ಭಾಗಮಂಡಲವು ಮಡಿಕೇರಿ ಜಿಲ್ಲಾ ಕೇಂದ್ರದಿಂದ ಸುಮಾರು 33 ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ ಮತ್ತು ಇದು ಮಡಿಕೇರಿ, ವಿರಾಜಪೇಟೆಗಳಿಂದ ಹಾಗೂ ಕೇರಳದಲ್ಲಿನ ಸನಿಹದ ಸ್ಥಳಗಳಿಂದ ಬರುವ ಸುಸಜ್ಜಿತ ರಸ್ತೆಗಳಿಂದ ಸಂಪರ್ಕಿಸಲ್ಪಟ್ಟಿದೆ.
ಭಾಗಮಂಡಲದ ಮೇಲೆ ನಿಂತು ಅಲ್ಲಿಂದ ಕಣ್ಣುಹಾಯಿಸಿ ನೋಡಿದರೆ ಥಾವೂರ್ ಪರ್ವತವು ಒಂದು ಅತ್ಯುನ್ನತ ಶಿಖರವಾಗಿ ಕಾಣುತ್ತದೆ. ಸನಿಹದಲ್ಲಿರುವ ಕೋಪಟ್ಟಿ ಪರ್ವತವು ಇದರ ಅವಳಿ ಶಿಖರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಈ ಎರಡೂ ಶಿಖರಗಳು ಶೋಲಾ ಅರಣ್ಯಶ್ರೇಣಿಯ ಸಮ್ಮೋಹನಗೊಳಿಸುವ ಸೌಂದರ್ಯವನ್ನು ಆಸ್ವಾದಿಸಲು ಬಯಸುವ ಯಾರಿಗೇ ಆದರೂ ಅತ್ಯುತ್ಕೃಷ್ಟವಾದ ಚಾರಣ ಮಾರ್ಗಗಳಾಗಿ ಪರಿಣಮಿಸುತ್ತವೆ. ಮೈಸೂರು ಸರ್ಕಾರಿ ಬಸ್ ನಿಲ್ದಾಣದಿಂದ ಇಲ್ಲಿಗೆ 153ಕಿಮೀಗಳಿವೆ.