ಹೆಲ್ಮೆಟ್ ಧರಿಸಿ ಕೆಲಸ ಮಾಡ್ತಾರೆ ಈ ಕಛೇರಿ ಸಿಬ್ಬಂದಿ; ಇದರ ಹಿಂದಿದೆ ಒಂದು ಕಾರಣ 28-02-2023 8:06AM IST / No Comments / Posted In: Latest News, India, Live News ರಸ್ತೆಯಲ್ಲಿ ವಾಹನ ಚಾಲನೆ ಮಾಡುವವರೇ ಕೆಲವೊಮ್ಮೆ ಹೆಲ್ಮೆಟ್ ಧರಿಸುವುದಿಲ್ಲ. ಆದರೆ ಉತ್ತರಪ್ರದೇಶದ ಸರ್ಕಾರಿ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಾರೆ. ನಿಮಗೆ ಅಚ್ಚರಿಯಾದರೂ ಇದು ಸತ್ಯ. ಪ್ರಾಣ ಉಳಿಸಿಕೊಳ್ಳಲು ಅವರು ಈ ರೀತಿ ಮಾಡುತ್ತಿದ್ದಾರೆ. ಕಟ್ಟಡದ ಮೇಲ್ಚಾವಣಿ ಮೇಲೆ ಬೀಳುವ ಭೀತಿಯಿಂದ ಅವರು ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಿದ್ದಾರೆ. ಇದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. ಬರೌತ್ ಪಟ್ಟಣದಲ್ಲಿರುವ ರಾಜ್ಯ ವಿದ್ಯುತ್ ಇಲಾಖೆಯ ಕಟ್ಟಡದ ಶಿಥಿಲಾವಸ್ಥೆಯಿಂದಾಗಿ ಎಂಜಿನಿಯರ್‌ಗಳು, ಗುಮಾಸ್ತರು ಮತ್ತು ಗುತ್ತಿಗೆ ಕಾರ್ಮಿಕರು ಸೇರಿದಂತೆ 40 ಕ್ಕೂ ಹೆಚ್ಚು ನೌಕರರು ಕಟ್ಟಡದೊಳಗೆ ಕೆಲಸ ಮಾಡುವಾಗ ಹೆಲ್ಮೆಟ್ ಧರಿಸಿದ್ದಾರೆ. ಸೀಲಿಂಗ್‌ನಿಂದ ನಮ್ಮ ಮೇಲೆ ಪ್ಲಾಸ್ಟರ್ ಬಿದ್ದು ಹಾನಿಯಾಗುವ ಕಾರಣದಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್‌ಗಳನ್ನು ಧರಿಸುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಕಾರ್ಮಿಕರು ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಬಾಗ್‌ಪತ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಇದೊಂದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ತನಿಖಾ ವರದಿ ಕೇಳಲಾಗುತ್ತದೆ ಎಂದರು. #Baghpat दफ़्तर में 'हेलमेट' लगाकर रहते हैं कर्मचारी हेलमेट पहनकर काम करते हैं विद्युतकर्मी जर्जर भवन से टूटकर गिरता है लेंटर का मलबा कई बार शिकायत के बाद भी नहीं हुआ समाधान विद्युत प्रशिक्षणशाला का वीडियो हुआ वायरल.@BagpatDm @UPGovt pic.twitter.com/1OO7TZyzPc — Eyenews (@eyenewsup) February 27, 2023