alex Certify ಕೊರೊನಾ ಸಾಂಕ್ರಾಮಿಕದ ಬಳಿಕ ಈ ಉದ್ಯಮದಲ್ಲಾಗಿದೆ ಭಾರೀ ಚೇತರಿಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಾಂಕ್ರಾಮಿಕದ ಬಳಿಕ ಈ ಉದ್ಯಮದಲ್ಲಾಗಿದೆ ಭಾರೀ ಚೇತರಿಕೆ….!

ಕೊರೊನಾ ವೈರಸ್​​ ಸೋಂಕಿನ ಭಯವು ಮಾರುಕಟ್ಟೆಯಲ್ಲಿ ಡ್ರೈಫ್ರೂಟ್ಸ್​​ಗೆ ಗಣನೀಯವಾಗಿ ಬೇಡಿಕೆ ಹೆಚ್ಚುವಂತೆ ಮಾಡಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಡ್ರೈ ಫ್ರೂಟ್ಸ್​ ವ್ಯಾಪಾರವು ಐದು ಪಟ್ಟು ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಲು ಡ್ರೈಫ್ರೂಟ್ಸ್​ ತಿನ್ನಲು ವೈದ್ಯರು ಸಲಹೆ ನೀಡಿರೋದೇ ಇದಕ್ಕೆ ಕಾರಣ ಎನ್ನಲಾಗಿದೆ.

ಗೋಡಂಬಿ, ಬಾದಾಮಿ, ಪಿಸ್ತಾ, ಖರ್ಜೂರ ಬಹುತೇಕ ಎಲ್ಲಾ ಅಂಗಡಿಗಳಲ್ಲಿ, ಬೀದಿ ಬದಿಯಲ್ಲಿ ಕಾಣಸಿಗುತ್ತದೆ. ಈ ಹಿಂದೆ ದಿನಕ್ಕೆ 2 ಸಾವಿರ ರೂಪಾಯಿಯನ್ನೂ ದುಡಿಯದ ಅಂಗಡಿಗಳು ಇದೀಗ ದಿನಕ್ಕೆ 10 ಸಾವಿರ ರೂಪಾಯಿ ಮಾರಾಟ ನಡೆಸುತ್ತಿವೆ.

ಬಹುತೇಕರು ಇದೀಗ ಮಾಸ್ಕ್​, ಸಾಮಾಜಿಕ ಅಂತರಗಳಂತೆ ಡ್ರೈ ಫ್ರೂಟ್ಸ್​ ಸೇವನೆಯನ್ನೂ ಕಡ್ಡಾಯ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಡ್ರೈಫ್ರೂಟ್ಸ್​ ಉದ್ಯಮದಲ್ಲಿ ಚೇತರಿಕೆ ಕಂಡು ಬಂದಿದೆ.

ಕಡಪದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಸುಮಾರು 150 ಡ್ರೈಫ್ರೂಟ್ಸ್​ ಮಾರಾಟಗಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಜಿಲ್ಲೆಯಲ್ಲಿ ಪ್ರತಿ ದಿನ ಡ್ರೈ ಫ್ರೂಟ್ಸ್​ ಮಾರಾಟದ ಮೊತ್ತ 15 ಲಕ್ಷದ ಗಡಿ ಸಮಿಪೀಸಿದೆ. ಇದು ಮಾತ್ರವಲ್ಲದೇ ಕಿರಾಣಿ ಅಂಗಡಿಗಳಲ್ಲೂ ವ್ಯಾಪಾರ ತೀವ್ರಗತಿಯಲ್ಲಿ ಸಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಖಾಸಗಿ ಇಂಜಿನಿಯರಿಂಗ್​ ಕಾಲೇಜಿನ ಉಪನ್ಯಾಸಕ ಸುಬ್ಬಾರೆಡ್ಡಿ, ಪ್ರತಿ ಮನೆಯಲ್ಲೂ ಈಗ ಡ್ರೈಫ್ರೂಟ್ಸ್​ ಅದರಲ್ಲೂ ವಿಶೇಷವಾಗಿ ಬಾದಾಮಿ ಇರುತ್ತದೆ. ಕೊರೊನಾ ಸಾಂಕ್ರಾಮಿಕ ಶುರುವಾದ ಬಳಿಕ ಅನೇಕರು ಮನೆಯಲ್ಲಿ ನೆನೆಸಿದ ಬಾದಾಮಿಯನ್ನು ಸೇವಿಸುತ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...