
ಬೆಂಗಳೂರು: ಕೆಪಿಎಸ್ಸಿ ಪ್ರಥಮ ದರ್ಜೆ ಸಹಾಯಕರ(FDA) ಪರೀಕ್ಷೆಯನ್ನು ಮುಂದೂಡಲಾಗಿದೆ. ನಾಳೆ ನಡೆಯಬೇಕಿದ್ದ ಎಫ್.ಡಿ.ಎ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.
1114 ಹುದ್ದೆಗಳಿಗೆ ನಾಳೆ ಪರೀಕ್ಷೆ ನಡೆಯಬೇಕಿತ್ತು. 3.94 ಲಕ್ಷ ಮಂದಿ ಪರೀಕ್ಷೆ ಕಟ್ಟಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಲಾಗಿದೆ ಎನ್ನಲಾಗಿದೆ.