ಬೆಂಗಳೂರು: ಫೆಬ್ರವರಿ 28 ರಂದು ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ.
ಜನವರಿ 24 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಪರಿಷ್ಕೃತ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. http://kpsc.jar.nic.in ವೆಬ್ ಸೈಟ್ ನಲ್ಲಿ ಫೆಬ್ರವರಿ 28 ಪರಿಷ್ಕೃತ ಪ್ರವೇಶ ಪತ್ರಗಳು ಎಂಬ ಶೀರ್ಷಿಕೆಯಡಿ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಜನವರಿ 24 ರ ಪರೀಕ್ಷೆಗೆ ಜಾರಿಗೊಳಿಸಲಾಗಿದ್ದ ಪ್ರವೇಶ ಪತ್ರಗಳನ್ನು ರದ್ದು ಮಾಡಲಾಗಿದೆ. ಇವುಗಳನ್ನು ಪರಿಗಣಿಸುವುದಿಲ್ಲ. ಅಭ್ಯರ್ಥಿಗಳು ಹೊಸ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಲಾಗಿದೆ.