ಉತ್ತಮ ಹೂಡಿಕೆ ಸದ್ಯ ಎಲ್ಲರ ಮೊದಲ ಆಯ್ಕೆ. ಅನೇಕ ಬ್ಯಾಂಕುಗಳು, ಸ್ಥಿರ ಠೇವಣಿ ಯೋಜನೆ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡ್ತಿವೆ. ಬಜಾಜ್ ಫೈನಾನ್ಸ್ ಕೂಡ ಸ್ಥಿರ ಠೇವಣಿ ಮೇಲೆ ಉತ್ತಮ ಬಡ್ಡಿ ನೀಡ್ತಿದೆ. ಬಜಾಜ್ ಫೈನಾನ್ಸ್, ಹೂಡಿಕೆದಾರರಿಗೆ ಖುಷಿ ಸುದ್ದಿ ನೀಡಿದೆ. ಹೂಡಿಕೆದಾರರು ಆನ್‌ಲೈನ್ ಮೂಲಕ ಸ್ಥಿರ ಠೇವಣಿ ಸೌಲಭ್ಯ ಪಡೆಯಬಹುದು.
ಬಜಾಜ್ ಫೈನಾನ್ಸ್ ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ 6.75ರ ಬಡ್ಡಿ ನೀಡುತ್ತದೆ. ಹೊಸ ಗ್ರಾಹಕರಿಗೆ ಶೇಕಡಾ 6.50ರ ಬಡ್ಡಿಯನ್ನು ನೀಡುತ್ತಿದೆ.
ಹೂಡಿಕೆದಾರರು, ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಆನ್‌ಲೈನ್ ಮೂಲಕ ಸುಲಭವಾಗಿ ಹೂಡಿಕೆ ಮಾಡಬಹುದು. ಆನ್‌ಲೈನ್ ಮೋಡ್ ಮೂಲಕ ನಿಶ್ಚಿತ ಠೇವಣಿ ಮಾಡಿದರೆ ಶೇಕಡಾ 6.60ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಾಗಿದ್ದರೆ ಪ್ರತ್ಯೇಕವಾಗಿ ಶೇಕಡಾ 0.25 ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರು ಬಜಾಜ್ ಫೈನಾನ್ಸ್ ನಲ್ಲಿ 20 ಲಕ್ಷ ರೂಪಾಯಿ ಹೂಡಿಕೆಯನ್ನು 3 ವರ್ಷಗಳ ಅವಧಿಗೆ ಆನ್ಲೈನ್ ಮೂಲಕ ಮಾಡಿದ್ರೆ ಮೂರು ವರ್ಷಗಳ ನಂತ್ರ 24, 22, 711 ರೂಪಾಯಿ ಪಡೆಯುತ್ತಾರೆ.
ಒಂದು ವೇಳೆ ಹೂಡಿಕೆದಾರರ ಬಳಿ ಒಟ್ಟಿಗೆ 20 ಲಕ್ಷ ಹೂಡಿಕೆ ಮಾಡಲು ಸಾಧ್ಯವಿಲ್ಲವೆಂದ್ರೆ ತಿಂಗಳಿಗೆ 5,000 ರೂಪಾಯಿಯಂತೆ ಹೂಡಿಕೆ ಮಾಡಬಹುದು. ಸ್ಥಿರ ಠೇವಣಿಯಲ್ಲಿ ಎರಡು ವಿಧಾನವಿದೆ. ಒಂದು ಮೆಚ್ಯೂರಿಟಿ ಸ್ಕೀಮ್ ಆದ್ರೆ ಮತ್ತೊಂದು ಮಾಸಿಕ ಮೆಚ್ಯೂರಿಟಿ ಸ್ಕೀಮ್. ಮೆಚ್ಯೂರಿಟಿಯಲ್ಲಿ ಒಟ್ಟು ಮೊತ್ತವನ್ನು ಒಟ್ಟಿಗೆ ಇಡಬೇಕು.