
ಪ್ರೊ ಕಬಡ್ಡಿಯ ದಾಖಲೆಗಳ ಸರದಾರ ಫಾಜೆಲ್ ಅತ್ರಾಚಲಿ ನಿನ್ನೆಯ ಪಂದ್ಯದಲ್ಲಿ 450 ಟ್ಯಾಕಲ್ ಪಾಯಿಂಟ್ ಗಳನ್ನು ಪೂರೈಸಿದ್ದಾರೆ. ಕಬ್ಬಡಿ ಇತಿಹಾಸದಲ್ಲೇ 450 ಪಾಯಿಂಟ್ ಗಳಿಸಿರುವ ಮೊದಲಿಗರಾಗಿದ್ದಾರೆ.
ಪ್ರೊ ಕಬಡ್ಡಿಯಲ್ಲಿ ಹಲವಾರು ವರ್ಷಗಳಿಂದ ಮಿಂಚಿರುವ ಇವರಿಗೆ ಸಾಕಷ್ಟು ಅನುಭವವಿದ್ದು, ಪಂದ್ಯದ ವೇಳೆ ರೈಡರ್ ಹಾಗೂ ಡಿಪೆಂಡರ್ ಗಳಿಗೆ ಕಿವಿ ಮಾತನ್ನು ಹೇಳುತ್ತಲೇ ಇರುತ್ತಾರೆ.
ಕಳೆದ ಬಾರಿ ಪ್ರೊ ಕಬ್ಬಡಿಯಲ್ಲಿ ಪುಣೇರಿ ಪಲ್ಟಾನ್ ತಂಡದ ನಾಯಕರಾಗಿದ್ದ ಫಾಜೆಲ್ ಸುಲ್ತಾನ್ ಅತ್ರಾಚಲಿ ತಮ್ಮ ತಂಡವನ್ನು ಫೈನಲ್ ಅಂತಕ್ಕೆ ಕರೆದುಕೊಂಡಿದ್ದರು. ಫಾಜೆಲ್ ಸುಲ್ತಾನ್ ಅತ್ರಾಚಲಿ ಈ ಬಾರಿ ಗುಜರಾತ್ ಜೈಂಟ್ಸ್ ನ ನಾಯಕರಾಗಿದ್ದಾರೆ.
