alex Certify SHOCKING NEWS: ಜೈಲುಪಾಲಾದ ತಂದೆ-ಮಗ; ಮನನೊಂದ ತಾಯಿ ಆತ್ಮಹತ್ಯೆ; ಸುದ್ದಿ ತಿಳಿದು ಹೃದಯಾಘಾತಕ್ಕೀಡಾದ ಪತಿ ಕಾರಾಗೃಹದಲ್ಲೇ ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಜೈಲುಪಾಲಾದ ತಂದೆ-ಮಗ; ಮನನೊಂದ ತಾಯಿ ಆತ್ಮಹತ್ಯೆ; ಸುದ್ದಿ ತಿಳಿದು ಹೃದಯಾಘಾತಕ್ಕೀಡಾದ ಪತಿ ಕಾರಾಗೃಹದಲ್ಲೇ ಸಾವು…!

ಮೈಸೂರು: ತಂದೆ-ಮಗ ಇಬ್ಬರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಈ ವಿಷಯ ತಿಳಿದ ಆಕೆಯ ಪತಿ ಜೈಲಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ತೇಜಸ್ ಹಾಗೂ ಆತನ ತಂದೆ ಸಾಮ್ರಾಟ್, ಬಾಲರಾಜ್ ಎಂಬಾತನ ಜೊತೆ ಸೇರಿ, ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನೇ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಐವರು ಆರೋಪಿಗಳು ಜೈಲುಪಾಲಾಗಿದ್ದಾರೆ. ಪತಿ ಸಾಮ್ರಾಟ್ ಹಾಗೂ ಮಗ ತೇಜಸ್ ಇಬ್ಬರೂ ಜೈಲು ಸೇರುತ್ತಿದ್ದಂತೆ ಮನನೊಂದ ಸಾಮ್ರಾಟ್ ಪತ್ನಿ ಇಂದ್ರಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೈಲಿನಲ್ಲಿದ್ದ ಸಾಮ್ರಾಟ್ ಹಾಗೂ ಆತನ ಮಗ ತೇಜಸ್ ಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಆಘಾತಕ್ಕೊಳಗಾದ ಸಾಮ್ರಾಟ್ ಜೈಲಿನಲ್ಲಿಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...