ಮಡಿಕೇರಿ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ತಂದೆ, ಮಗ ನೀರು ಪಾಲಾದ ಘಟನೆ ಕುಶಾಲನಗರ ತಾಲೂಕಿನ ಚಿಕ್ಕಬೆಟಗೇರಿಯಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚಿಕ್ಕಬೆಟಗೇರಿಯಲ್ಲಿ ತಂದೆ ಮಣಿಕಂಠ(47), ಮಗ ಪ್ರೀತಮ್(15) ಮೃತಪಟ್ಟವರು. ನದಿಯಲ್ಲಿ ಸ್ನಾನಕ್ಕೆ ಇಳಿದಾಗ ತಂದೆ, ಮಗ ನೀರು ಪಾಲಾಗಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.