
ಯುವತಿ ಅಂತರ್ಜಾತಿಯವನನ್ನು ಪ್ರೀಟಿಸಿದಳು ಎಂಬ ಕಾರಣಕ್ಕೆ ತಂದೆ ಹಾಗೂ ಅಣ್ಣನೇ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ತಂದೆ ಮಗಳನ್ನೇ ಕೊಂದುಬಿಡಲು ನಿರ್ಧರಿಸಿದ್ದಾರೆ. ಅದಕ್ಕೆ ತನ್ನ ಮಗನ ಸಹಾಯವನ್ನೂ ಪಡೆದಿದ್ದಾರೆ. ಪ್ಲಾನ್ ನಂತೆ ಮಗಳನ್ನು ಕೊಂದು ಆಕೆಯ ಮೃತದೇಹವನ್ನು ಸುಟ್ಟು ಹಾಕಿದ್ದಾರೆ.
23 ವರ್ಷದ ಯುವತಿ ನೇಹಾ ಹಾಜಿಪುರ ನಿವಾಸಿ ಸೂರಜ್ ನನ್ನು ಪ್ರೀತಿಸುತ್ತಿದ್ದಳು. ಆದರೆ ವಿವಾಹಕ್ಕೆ ಕುಟುಂಬದವರ ವಿರೋಧವಿತ್ತು. ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಲು ಮುಂದಾಗಿದ್ದರು. ವಿಷಯ ತಿಳಿದ ತಂದೆ ಹಾಗೂ ಅಣ್ಣ ನೇಹಾಳನ್ನು ಕೊಲೆ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೇಹಾಳ ತಂದೆ ಭಾನು ರಾಥೋಡ್ ಹಾಗೂ ಅಣ್ಣ ಹಿಮಾಂಶು ರಾಥೋಡ್ ನನ್ನು ಬಂಧಿಸಿದ್ದಾರೆ.