ಕಳೆದ 24 ವರ್ಷಗಳ ಅವಧಿಯಲ್ಲಿ ಮೋಟರ್ಬೈಕ್ಗಳನ್ನೇರಿ 4,80,000 ಕಿಮೀ ಕ್ರಮಿಸಿರುವ ಚೀನಾದ ಹುನಾನ್ ಪ್ರಾಂತ್ಯದ ಗುವೋ ಗ್ಯಾಂಗ್ಟಾಂಗ್, 1997ರಿಂದಲೂ ಕಾಣೆಯಾಗಿದ್ದ ತಮ್ಮ ಮಗನ ತಲಾಶೆಯಲ್ಲಿದ್ದರು.
ತನ್ನ ಕುಟುಂಬದ ಉಳಿತಾಯದ ಅಷ್ಟೂ ದುಡನ್ನು ಮಗನ ಶೋಧಕ್ಕೇ ವಿನಿಯೋಗಿಸಿದ ಗ್ಯಾಂಗ್ಟಾಂಗ್ ಇದೇ ಅವಧಿಯಲ್ಲಿ ಚೀನಾದ ಎರಡು ದೊಡ್ಡ ಪ್ರಾಂತ್ಯಗಳನ್ನೆಲಾ ಹಾದು ಬಂದಿದ್ದಾರೆ. ಈ ಅವಧಿಯಲ್ಲಿ ತಮ್ಮ ಮೈ ಮೂಳೆಗಳನ್ನೆಲ್ಲಾ ಮುರಿದುಕೊಂಡಿರುವ ಗಾಂಗ್ಟಾಂಗ್ ಪುತ್ರವಾತ್ಸಲ್ಯದ ಎರಕರೂಪವಾಗಿಬಿಟ್ಟಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆಯಲಿದ್ದಾರಾ ಪ್ರಭಾವಿ ನಾಯಕ…?
ಎರಡೂವರೆ ದಶಕಗಳ ಕಾಲ ನಿರಂತರ ಶೋಧಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದ, ತಮ್ಮ ಪುತ್ರ ಗಾವೋ ಶಿಂಜ಼ೆನ್ನನ್ನು ಕೊನೆಗೂ ಭೇಟಿ ಮಾಡಿದ ಗಾಂಗ್ಟಾಂಗ್ರ ಭಾವುಕ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಶೇರ್ ಮಾಡಲಾಗಿದೆ.