ಒಡಿಶಾದ ಬರಿಪದದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಗನೊಬ್ಬ ಗುಟ್ಕಾ ತಿನ್ನಲು ಹಣ ನೀಡದ ಕಾರಣಕ್ಕೆ ತನ್ನ ತಂದೆಯ ತಲೆಯನ್ನು ಕಡಿದಿದ್ದಾನೆ.
40 ವರ್ಷದ ಮಗ 70 ವರ್ಷದ ತನ್ನ ತಂದೆಯ ತಲೆಯನ್ನು ಮಂಗಳವಾರ ಕತ್ತರಿಸಿದ್ದಾನೆ. ರಕ್ತ ಸೋರುತ್ತಿದ್ದ ತಲೆಯನ್ನು ಆತನೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾನೆ.
ಮೃತಪಟ್ಟವರನ್ನು ಬೈದರ್ ಸಿಂಗ್ ಎಂದು ಗುರುತಿಸಲಾಗಿದೆ. ಚೂಪಾದ ಆಯುಧದಿಂದ ಮಗನು ತಂದೆಯ ತಲೆ ಕತ್ತರಿಸಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ತಾಯಿ ಘಟನಾ ಸ್ಥಳದಿಂದ ಓಡಿಹೋಗಿದ್ದರಿಂದ ಬಚಾವಾಗಿದ್ದಾರೆ.
ತಂದೆ – ಮಗನ ಮಧ್ಯೆ ವಾಗ್ವಾದ ಏರ್ಪಟ್ಟಿತ್ತು. ಇದು ತಾರಕ್ಕಕ್ಕೇರಿ ಮಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.