ತಮ್ಮ ಗಮನಕ್ಕೆ ತರದೆಯೇ 7 ವರ್ಷದ ಮಗಳ ಜಡೆಯನ್ನು ಕತ್ತರಿಸಿದ ಶಾಲೆಯ ವಿರುದ್ಧ ತಂದೆಯೊಬ್ಬರು ಜನಾಂಗೀಯ ತಾರತಮ್ಯ ಮತ್ತು ಮಗಳ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡ ಆರೋಪ ಹೊರಿಸಿ ಪ್ರಕರಣ ಹೂಡಿದ್ದಾರೆ.
ಜಿಮ್ಮಿ ಹಾಫ್‌ಮೀಯರ್ ಎನ್ನುವವರು ಅಮೆರಿಕದ ಮಿಷಿಗನ್‌ನಲ್ಲಿರುವ ಗಾನಿಯಾರ್ಡ್ ಎಲಿಮೆಂಟರಿ ಶಾಲೆ ವಿರುದ್ಧ ದಾವೆ ಹೂಡಿದ್ದಾರೆ. ತಮ್ಮ ಮಗಳ ಕೂದಲನ್ನು ಲೈಬ್ರರಿಯನ್ ಮತ್ತು ಟೀಚರ್ ಸೇರಿಕೊಂಡು ಕತ್ತರಿಸಿದ್ದಾರೆ. ಇದು ಆಕೆಯ ಭಾವನಾತ್ಮಕ ಅಸಮತೋಲನಕ್ಕೆ ಕಾರಣವಾಗಿದೆ. ಜನಾಂಗೀಯ ನಿಂದನೆಗೆ ಪರೋಕ್ಷವಾಗಿ ಯತ್ನಿಸಿದ್ದಾರೆ ಎಂದು ಜಿಮ್ಮಿ ಆರೋಪ ಹೊರಿಸಿದ್ದಾರೆ.
ಶೈಕ್ಷಣಿಕ ವರ್ಷದ ರಜೆಗಳ ಹೆಸರುಗಳನ್ನೇ ಕೈಬಿಡಲು ನಿರ್ಧರಿಸಿದ ಶಾಲಾ ಮಂಡಳಿ
ಮೊದಲ ಬಾರಿಗೆ ಶಾಲೆ ಬಸ್‌ನಲ್ಲಿ ಮಗಳ ಕೂದಲನ್ನು ಆಕೆಯ ಸಹಪಾಠಿ ಕತ್ತರಿಸಿದ್ದಾನೆ. ಆಗ ಸಮಾಧಾನ ತಂದುಕೊಂಡು, ಎಲ್ಲ ಬದಿಯ ಕೂದಲನ್ನು ಒಂದೇ ಅಳತೆಗೆ ಮಾಡಿಸಿ, ಶಾಲೆಗೆ ಕಳುಹಿಸಿಕೊಟ್ಟೆವು. ಮಾರನೇಯ ದಿನ ಮಗಳು ಪುನಃ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ಮನೆಗೆ ಬಂದಾಗ ಹೌಹಾರಿದೆವು. ಆಕೆ ಟೀಚರ್ ಕೃತ್ಯ ಎಂದು ಅಳುತ್ತಾ ತಿಳಿಸಿದಳು. ಮಗಳ ಕೂದಲು ಬಿಳಿಯಾಗಿರುವ ಕಾರಣ ಶಾಲೆಯು ಜನಾಂಗೀಯ ನಿಂದನೆಗೆ ಯತ್ನಿಸಿದೆ ಎಂದು ಜಿಮ್ಮಿ ಅವರು ಕೋರ್ಟ್‌ಗೆ ವಕೀಲರ ಮೂಲಕ ತಿಳಿಸಿದ್ದಾರೆ. ಆದರೆ ಶಾಲೆಯು ಈ ಆರೋಪವನ್ನು ತಳ್ಳಿಹಾಕಿದೆ.
ಇಷ್ಟೆಲ್ಲ ಆದರೂ ಕೂಡ ಶಾಲಾ ಮಂಡಳಿಯು ಆಂತರಿಕ ತನಿಖೆ ಕೂಡ ನಡೆಸಿಲ್ಲ. ಬದಲಿಗೆ ಮಗಳನ್ನು ಬೇರೆ ಶಾಲೆಗೆ ಸೇರುವಂತೆ ವರ್ಗಾವಣೆ ಪತ್ರ ನೀಡಿದೆ ಎಂದು ಮಾಧ್ಯಮಗಳಿಗೆ ಜಿಮ್ಮಿ ತಿಳಿಸಿದ್ದಾರೆ.