
ಮಡಿಕೇರಿ: ಪುತ್ರನೇ ದೊಣ್ಣೆಯಿಂದ ಹೊಡೆದು ತಂದೆಯ ಹತ್ಯೆ ಮಾಡಿದ್ದಾನೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಂಗಲದಲ್ಲಿ ಘಟನೆ ನಡೆದಿದೆ.
68 ವರ್ಷದ ಚೇಂದ್ರಿಮಾಡರಾಜ ಅವರನ್ನು ಪುತ್ರ ದರ್ಶನ್ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಿನ್ನೆ ತಂದೆಯ ಮೇಲೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಚಿಕಿತ್ಸೆಗಾಗಿ ಚೇಂದ್ರಿಮಾಡರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ. ಆರೋಪಿ ದರ್ಶನ್ ನನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.