ಚಂಡೀಗಢ : 9 ಜನರ ಬದುಕಿಗೆ ಎರಡು ವರ್ಷದ ಬಾಲಕಿಯೊಬ್ಬಳು ಬೆಳಕಾಗಿರುವ ಘಟನೆಯೊಂದು ನಡೆದಿದೆ.
ಅಪಘಾತದಲ್ಲಿ 2 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದರೂ ತಂದೆಯೊಬ್ಬರು ಅವಳ ಅಂಗಾಂಗಳನ್ನು ದಾನ ಮಾಡುವುದರ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅಲ್ಲದೇ, ಈ ಪುಟ್ಟ ಬಾಲಕಿಯ ಅಂಗಾಂಗಗಳು 9 ಜನರ ಬಾಳಿಗೆ ಬೆಳಕು ನೀಡಲಿವೆ.
ಪಂಜಾಬ್ ರಾಜ್ಯದಲ್ಲಿನ ಮೊಹಾಲಿಯಲ್ಲಿ ಇತ್ತೀಚೆಗಷ್ಟೇ ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ಘಟನೆಯಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದರು. 2 ವರ್ಷದ ಅನಾಯಕ ಎಂಬ ಪುಟ್ಟ ಮಗು ಕೂಡ ಈ ಘಟನೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಚಂಡೀಗಢ ಪಿಜಿಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
BIG NEWS: ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; 6 ಜನರ ದುರ್ಮರಣ; 12 ಜನ ಗಂಭೀರ
ಹೆತ್ತ ಕುಡಿ ಚಿಕ್ಕವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದ ಹಾಗೂ ಕುಟುಂಬದ 6 ಜನ ಸದಸ್ಯರನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದರೂ ಅನಾಯಕಳ ತಂದೆ ಅಮಿತ್ ಗುಪ್ತಾ, ಮಗಳ ಅಂಗಾಂಗಳನ್ನು ದಾನ ಮಾಡಿದ್ದಾರೆ.
ಈಗಾಗಲೇ ಪಿಜಿಐ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನ ಪ್ರಕ್ರಿಯೆ ಮುಂದುವರೆಸಿದ್ದು, ಯಕೃತ್ ನ್ನು ಅಹ್ಮದಾಬಾದ್ ಗೆ, ಹೃದಯವನ್ನು ಚೆನ್ನೈಗೆ ಕಳುಹಿಸಿದ್ದಾರೆ. ಮೇದೋಜೀರಕ ಗ್ರಂಥಿ, ಮೂತ್ರಪಿಂಡ ಹಾಗೂ ಕಣ್ಣಿನ ಕಸಿ ಮಾಡುವ ಕಾರ್ಯ ಮುಂದುವರೆಸಿದ್ದಾರೆ.