ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..? 08-11-2021 8:22AM IST / No Comments / Posted In: Latest News, India, Live News ದೀಪಾವಳಿ ಸೀಸನ್ ಎಂದರೆ ಮಣ್ಣಿನ ದೀಪಗಳು, ಗೂಡುದೀಪಗಳು, ಬಾಗಿಲು ಮತ್ತು ಕಿಟಕಿಗಳಲ್ಲಿ ಉರಿಯುವ ಮೇಣದ ಬತ್ತಿಗಳು, ಮನೆಯಲ್ಲಿನ ಅಲಂಕಾರಗಳು ಮತ್ತು ಕುಟುಂಬದೊಂದಿಗೆ ಉತ್ತಮ ಕಾಲ ಕಳೆಯುವ ಸದಾವಕಾಶವಾಗಿದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, 2020 ರಿಂದ ಅತ್ಯಂತ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ದೀಪಾವಳಿಯ ಸಮಯದಲ್ಲಿ ಕುಟುಂಬದೊಂದಿಗೆ ಇರಬೇಕೆಂಬ ಬಯಕೆ ಬಲಗೊಳ್ಳುತ್ತದೆ. ಆದರೆ, ಏನೋ ಒಂದು ಕಾರಣದಿಂದ ಜೊತೆಯಿರಲಾಗದೆ ಹಲವು ಮಂದಿ ಬೇಸರಗೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬರ ಪುತ್ರಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಂತ ದೀಪಾವಳಿ ಹಬ್ಬವನ್ನು ಅವರು ಮಿಸ್ ಮಾಡಿಕೊಂಡಿಲ್ಲ. ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಟಿವಿ ಚಾನಲ್ ದರ ಶೇಕಡ 50 ರಷ್ಟು ಹೆಚ್ಚಳ ಸಾಧ್ಯತೆ ಹೌದು, ಡೆಂಗ್ಯೂನಿಂದ ಬಳಲುತ್ತಿರುವಾಕೆಯ ತಂದೆಯು, ತನ್ನ ಮಗಳ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಪುತ್ರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ರೂ, ತಂದೆಯು ಮಗಳಿಗಾಗಿ ಆಸ್ಪತ್ರೆಯ ವಾರ್ಡ್ ಅನ್ನು ಅಲಂಕರಿಸಿದ್ದಾರೆ. ಹೂವು, ದೀಪಗಳು, ಬಲೂನ್ ಗಳಿಂದ ವಾರ್ಡ್ ಅನ್ನು ಅಲಂಕರಿಸಿದ್ದು, ಪುತ್ರಿಯನ್ನು ಸಂತಸಗೊಳಿಸಿದ್ದಾರೆ. ರಾಹುಲ್ ಶರ್ಮಾ ತನ್ನ ಮಗಳಿರುವ ಆಸ್ಪತ್ರೆಯ ಕೋಣೆಯನ್ನು ಸುಂದರವಾಗಿ ಅಲಂಕರಿಸಿ ಟ್ವಿಟ್ಟರ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ 17,000 ಲೈಕ್‌ಗಳು ಬಂದಿದ್ದು, ಮಗಳಿಗಾಗಿ ತಂದೆ ಮಾಡಿದ ಉತ್ತಮ ಕೆಲಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.