ಸಾಮಾನ್ಯವಾಗಿ ಮಗಳಿಗೆ ಜಡೆ ಹೆಣೆಯುವುದು, ಕೂದಲು ಬಾಚುವುದು ತಾಯಿ. ಆದರೆ ತಂದೆಯೊಬ್ಬ ತನ್ನ ಮಗಳ ಕೂದಲನ್ನು ವಿಶಿಷ್ಟ ರೀತಿಯಲ್ಲಿ ಬಾಚುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದೀಗ ಐದು ಲಕ್ಷಕ್ಕೂ ಹೆಚ್ಚು ಮಂದಿಯ ಹೃದಯ ಗೆದ್ದಿದೆ.
ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಮಗಳನ್ನು ಶಾಲೆಗೆ ಸಿದ್ಧಗೊಳಿಸುತ್ತಿರುವುದನ್ನು ಕಾಣಬಹುದು. ಅವಳ ಕೂದಲನ್ನು ಬಾಚಲು ಮತ್ತು ಆಕೆಯ ಕೂದಲಿನಿಂದ ಬನ್ (ಮುಡಿ) ತಯಾರಿಸಲು ತಲೆಯನ್ನು ತಿರುಗಿಸುವಂತೆ ಮಗಳಿಗೆ ಹೇಳುತ್ತಾರೆ. ಮಗಳು ಅಪ್ಪ ಹೇಳಿದಂತೆಯೇ ಕೇಳುತ್ತಾಳೆ. ನಂತರ ಮಗಳಿಗೆ ಜುಟ್ಟು ಹಾಕಿ ಅದನ್ನು ನಿಧಾನವಾಗಿ ಹಿಡಿದು ಬನ್ ತಯಾರಿಸಿರುವುದು ವಿಡಿಯೋದಲ್ಲಿ ಕಾಣಬಹುದು.
ಇದೇ ವೇಳೆ ಮಗಳು ಕೂಡ ಮುದ್ದುಮುದ್ದು ಭಾಷೆಯಲ್ಲಿ ತಂದೆಗೆ ನಿರ್ದೇಶನವನ್ನೂ ನೀಡುತ್ತಿದ್ದಾಳೆ. ತಂದೆ-ಮಗಳ ಈ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರತಿನಿತ್ಯವೂ ಮಗಳಿಗೆ ವಿಧವಿಧ ಕೇಶವಿನ್ಯಾಸ ಮಾಡುವುದು ತಾನೇ ಎಂದು ಈ ಅಪ್ಪ ಹೇಳಿಕೊಂಡಿದ್ದಾರೆ. ಅಮ್ಮ ಮಾತ್ರವಲ್ಲದೇ ಅಪ್ಪ ಕೂಡ ಮಗಳ ಜಡೆ ಹೆಣೆಯಬಹುದು. ಹೊಸಹೊಸ ಕೇಶವಿನ್ಯಾಸ ಮಾಡಬಹುದು ಎನ್ನುವುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವರು ಕಮೆಂಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
https://twitter.com/TheFigen_/status/1589974226127069184?ref_src=twsrc%5Etfw%7Ctwcamp%5Etweetembed%7Ctwterm%5E1589974226127069184%7Ctwgr%5Eacd9b54ba8d55cbb19f939dd2ac1dbd084359c4d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-combs-his-daughters-hair-every-morning-in-wholesome-viral-video-netizens-cant-help-but-go-aww-2295350-2022-11-09