ಕೋಲಾರ: ಸಾಲ ತೀರಿಸಲು ತಂದೆಯೊಬ್ಬ ತನ್ನ ಮಗುವನ್ನೇ ಮಾರಾಟ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಬಂಗಾರಪೇಟೆ ನಿವಾಸಿ ಮುನಿರಾಜು ತನ್ನ ಗಂಡು ಮಗುವನ್ನೇ ಮಾರಾಟ ಮಾಡಿದ್ದಾನೆ ಎಂಬ ಆರೊಪ ಕೇಳಿಬಂದಿದೆ. ಮುನಿರಾಜು ಹಾಗೂ ಪವಿತ್ರಾ ದಂಪತಿಗೆ 2023ರ ಜೂನ್ 21ರಂದು ಗಂಡುಮಗು ಹುಟ್ಟಿದೆ.
ಹಣದ ಆಸೆಗೆ ಮುನಿರಾಜು ತನ್ನ ಮಗುವನ್ನು ಕೆರೆಕೊಡಿ ನೀವಾಸಿ ವಲ್ಲಿ ಎಂಬ ಮಹಿಳೆಗೆ ಮಾರಾಟ ಮಾಡಿದ್ದಾನೆ. ಈ ಬಗ್ಗೆ ಮುನಿರಾಜು ಪತ್ನಿ ಪವಿತ್ರಾ ದೂರು ನೀಡಿದ್ದು, ತನ್ನ ಮಗುವನ್ನು ವಾಪಾಸ್ ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪ್ರಕರಣ ಸಂಬಂಧ ಆರೋಪಿ ಮುನಿರಾಜುನನ್ನು ಪೊಲೀಸರು ಬಂಧಿಸಿದ್ದಾರೆ.