![](https://kannadadunia.com/wp-content/uploads/2023/05/9ee0570a-3739-4aa9-abdd-832fc5be73fd.jpg)
ಪಶ್ಚಿಮ ಬಂಗಾಳದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗನ ಶವವನ್ನು ಆಂಬುಲೆನ್ಸ್ ನಲ್ಲಿ ಸಾಗಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬ ಮೃತ ದೇಹವನ್ನು ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದಿದ್ದಾನೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಘಟನೆ ಭಾನುವಾರದಂದು ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಕಾಲಿಯಾಗಂಜ್ ನಿವಾಸಿ ಒಬ್ಬರ ಐದು ತಿಂಗಳ ಗಂಡು ಮಗು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.
ಮಗನ ಚಿಕಿತ್ಸೆಗಾಗಿ ಆಗಲೇ 16 ಸಾವಿರ ರೂಪಾಯಿ ಖರ್ಚು ಮಾಡಿದ್ದ ಆ ವ್ಯಕ್ತಿಗೆ ಸಿಲಿಗುರಿಯಿಂದ 200 ಕಿ.ಮೀ ದೂರವಿರುವ ಕಾಲಿಯಾಗಂಜ್ ಗೆ ಶವವನ್ನು ಕೊಂಡೊಯ್ಯಲು ಆಂಬುಲೆನ್ಸ್ ಚಾಲಕ 8 ಸಾವಿರ ರೂಪಾಯಿ ಕೇಳಿದ್ದ. ಆದರೆ ಅಷ್ಟು ಹಣವಿಲ್ಲದ ಅಶಿಮ್ ದೇಬ್ವರ್ಮ ಎಂಬ ಈ ಬಡ ತಂದೆ ಮಗನ ಶವವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬಸ್ಸಿನಲ್ಲಿ ಕೊಂಡೊಯ್ದಿದ್ದಾರೆ.